ಮೈಕ್ ಹಿಂದಿನ ವ್ಯಕ್ತಿತ್ವ ಜನರಿಗೆ ಗೊತ್ತು

8-SanduruP4
Published on

ಸಂಡೂರು: ಸಂಸದ ಈ.ತುಕಾರಾಮ್ ಸಂಸ್ಕಾರದ ಬಗ್ಗೆ ಮಾತಾಡುತ್ತಾರೆ. ಆದರೆ, ಮೈಕ್ ಹಿಂದೆ ಅವರು ಏನೆಂಬುದು ಸಂಡೂರಿನ ಜನಕ್ಕೆ ಗೊತ್ತಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹೇಳಿದರು.

ಪಟ್ಟಣದಲ್ಲಿ ಪಕ್ಷದ ಕಚೇರಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಬುಧವಾರ ಮಾತನಾಡಿದರು. ರೈತರಿಗೆ ಬೆಲೆ ಕೊಡದ, ವಾಲ್ಮೀಕಿ ನಿಗಮದ ಹಣದಿಂದ ಗೆದ್ದುಬಂದಿರುವ ತುಕಾರಾಮ್, ಹಗರಣ ಬಹಿರಂಗವಾದ ಕೂಡಲೇ ರಾಜಿನಾಮೆ ಕೊಡಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡುವ ಸಚಿವ ಸಂತೋಷ್ ಲಾಡ್ ಅವರನ್ನು ಕಲಘಟಗಿಯಲ್ಲಿ ಮುಂದಿನ ಬಾರಿ ಸೋಲಿಸುತ್ತೇವೆ. ಚಿತ್ರಕಿ ಸತೀಶ್ ಸೇರಿದಂತೆ ಐದು ಜನರ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಸಚಿವ ಸಂತೋಷ್ ಲಾಡ್, ಸಂಸದ ತುಕಾರಾಮ್, ಶಾಸಕಿ ಅನ್ನಪೂರ್ಣ ತುಕಾರಾಮ್ ಇರುವವರೆಗೆ ಯಾವೊಬ್ಬ ವಾಲ್ಮೀಕಿ ಮುಖಂಡ ಬೆಳೆಯಲು ಬಿಡುವುದಿಲ್ಲ ಎಂದು ಬಂಗಾರು ಹನುಮಂತು ತಿಳಿಸಿದರು.

ಮಂಡಲ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಉಡೇದ್ ಸುರೇಶ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಾಮಕೃಷ್ಣ, ಪ್ರಮುಖರಾದ ಗುಡೆಕೋಟೆ ನಾಗರಾಜ, ನರೇಂದ್ರ ಪಾಟೀಲ್, ಬಿ.ವಸಂತಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net