ಮೇಹಕರ್‌ನಲ್ಲಿ ರಸ್ತೆ ಒತ್ತುವರಿ ತೆರವು

oplus_2
ಹುಲಸೂರು ಸಮೀಪದ ಭಾಲ್ಕಿ ತಾಲೂಕಿನ ಮೇಹಕರ್‌ನಲ್ಲಿ ಜೆಸಿಬಿ ಯಂತ್ರದಿಂದ ರಸ್ತೆ ಅಗಲೀಕರಣ ಮಾಡುತ್ತಿರುವುದು.
Published on

ಹುಲಸೂರು: ಸಮೀಪದ ಭಾಲ್ಕಿ ತಾಲೂಕಿನ ಮೇಹಕರ್ ಗ್ರಾಮದ ಮುಖ್ಯರಸ್ತೆ ಎರಡೂ ಬದಿ ಒತ್ತುವರಿ ಮಾಡಿಕೊಂಡ ಅಂಗಡಿ-ಮುಂಗಟ್ಟು ಹಾಗೂ ಮನೆಗಳನ್ನು ಶುಕ್ರವಾರ ಜೆಸಿಬಿ ಯಂತ್ರದಿಂದ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಪೊಲೀಸ್ ಭದ್ರತೆಯೊಂದಿಗೆ ತೆರವುಗೊಳಿಸಲಾಯಿತು.

ಜೈ ಹನುಮಾನ ದೇವಸ್ಥಾನದಿಂದ ಮಹಾಕಾಳೇಶ್ವರ ದೇಗುಲವರೆಗೆ ೩೩ ಅಡಿ ರಸ್ತೆ ಅಗಲೀಕರಣ ಮಾಡಲಾಗಿದೆ. ಕೆಲವರ ಆಕ್ಷೇಪ ಹೊರತುಪಡಿಸಿ ಬಹುತೇಕರು ಕಾರ್ಯಾಚರಣೆಗೆ ಸಹಕಾರ ನೀಡಿದರು. ಸುಮಾರು ವರ್ಷದಿಂದ ರಸ್ತೆ ಅತಿಕ್ರಮಣ ಆಗಿದ್ದರಿಂದ ಜನರು ತುಂಬ ಸಂಕಷ್ಟ ಅನುಭವಿಸುತ್ತಿದ್ದರು. ಹಳ್ಳಿಗರ ದೂರಿನ ಮೇರೆಗೆ ಗ್ರಾಪಂ ಒಮ್ಮತದ ನಿರ್ಣಯ ಕೈಗೊಂಡು ರಸ್ತೆ ಅಗಲೀಕರಣ ಮಾಡುತ್ತಿರುವುದಾಗಿ ಪಿಡಿಒ ಗಣೇಶ ತಿಳಿಸಿದ್ದಾರೆ.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸೂರ್ಯಕಾಂತ ಬಿರಾದಾರ, ಸಿಪಿಐ ಜಿ.ಎಸ್. ಬಿರಾದಾರ, ಪಿಎಸ್‌ಐಗಳಾದ ಶಿವಕುಮಾರ ಬಳತೆ, ಮಾಣಿಕಪ್ಪ, ಎಎಸ್‌ಐ ಚಂದ್ರಶೇಖರ, ಗ್ರಾಪಂ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net