ಮೇಳ ಸದ್ಬಳಕೆ ಮಾಡಿಕೊಳ್ಳಿ :ಶಿವ ಸಂಕೇಶ್ವರ ಸಲಹೆ

Krushi mela 2
Published on

ಮೈಸೂರು: ಮೂರು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಕೃಷಿ ಮೇಳದಲ್ಲಿ ಅಂದಾಜು 2 ಲಕ್ಷಕ್ಕಿಂತ ಹೆಚ್ಚಿನ ಜನರು ಆಗಮಿಸಿ ಮಾಹಿತಿಗಳನ್ನು ಪಡೆದುಕೊಂಡಿದ್ದರು. ಈ ಬಾರಿ ಮೇಳದಲ್ಲಿ ಹೆಚ್ಚಿನ ಜನರು ಆಗಮಿಸಿ ಉಪಯುಕ್ತ ಮಾಹಿತಿ ಪಡೆದುಕೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿದೆ. ರೈತರು ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಹೀಗಾಗಿ, ಅನ್ನದಾತರಿಗೆ ನಮ್ಮ ಕುಟುಂಬದ ವತಿಯಿಂದ ಸಣ್ಣ ಸಹಾಯ ಎಂದು ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ಹೇಳಿದರು.

ಪ್ರತಿನಿತ್ಯ ನಾವು ಮೂರು ಹೊತ್ತು ಊಟ ಮಾಡುವುದಕ್ಕೆ, ಮೈತುಂಬ ಬಟ್ಟೆ ಹಾಕಿಕೊಳ್ಳುವುದಕ್ಕೆ ರೈತರು ಕಾರಣ. ರೈತರು ಇಲ್ಲ ಅಂದರೆ ನಾವಿಲ್ಲ. ಕೃಷಿ ಮೇಳಕ್ಕೆ ಸಹಕರಿಸಿದ ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದರು. ನಾವು ಹಲವು ಕಾರ್ಯಕ್ರಮವನ್ನು ನಡೆಸುತ್ತೇವೆ. ಪ್ರಾಪರ್ಟಿ ಎಕ್ಸ್‌ಪೋ, ಎಜುಕೇಷನ್ ಎಕ್ಸ್‌ಪೋ, ಆಟೋಮೊಬೈಲ್ ಎಕ್ಸ್‌ಪೋ ನಂತಹ ಹಲವು ಮೇಳವನ್ನು ನಡೆಸಿದ್ದೇವೆ. ಆದರೆ, ಕೃಷಿ ಮೇಳ ಎಲ್ಲ ಮೇಳಕ್ಕಿಂತ ವಿಭಿನ್ನವಾಗಿದೆ. ಹಾಗಾಗಿ, ರೈತರು ಸೇರಿದಂತೆ ಹೆಚ್ಚಿನ ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಬೇಕೆಂದು ಶಿವ ಸಂಕೇಶ್ವರ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net