

ಮೇಲುಕೋಟೆ: ಚೆಲುವನಾರಾಯಣ ಸ್ವಾಮಿಯ ಕಾರ್ತಿಕಮಾಸದ ರಾಜಮುಡಿ ಬ್ರಹ್ಮೋತ್ಸವ ಭಾನುವಾರ ಸಂಜೆ ಧ್ವಜಾರೋಹಣದೊಂದಿಗೆ ವಿಧ್ಯುಕ್ತವಾಗಿ ಆರಂಭವಾಯಿತು. ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಗರುಡಪಟವನ್ನು ಚಿನ್ನದ ಧ್ವಜಸ್ತಂಭದಲ್ಲಿ ಆರೋಹಣ ಮಾಡಲಾಯಿತು.
ಸ್ಥಾನೀಕರಾದ ತಿರುನಾರಾಯಣ ಅಯ್ಯಂಗಾರ್, ಮುಕುಂದನ್, ಪ್ರಸನ್ನ, ಸಂಪತ್ಕುಮಾರನ್, ಗರುಡಸ್ತುತಿಯನ್ನು ಪಠಿಸಿದ ನಂತರ ಧ್ವಜಾರೋಹಣ ನೆರವೇರಿಸಲಾಯಿತು. ಬ್ರಹ್ಮೋತ್ಸವದ 4 ದಿನವಾದ ನ. 2ರ ರಾತ್ರಿ 7ಕ್ಕೆ ಮೈಸೂರು ರಾಜ ಒಡೆಯರ್ ಸಮರ್ಪಿಸಿರುವ ವಜ್ರಖಚಿತ ರಾಜಮುಡಿ ಕಿರೀಟ, ಗಂಡಭೇರುಂಡ ಪದಕ ಸೇರಿದಂತೆ 16 ವಜ್ರಖಚಿತ ಆಭರಣಗಳಿಂದ ಸ್ವಾಮಿಯನ್ನು ಅಲಂಕರಿಸಿ ಉತ್ಸವ ನೆರವೇರಿಸಲಾಗುತ್ತದೆ. ನ.3ರ ಗುರುವಾರ ಚೆಲುವನಾರಾಯಣನ ಅಷ್ಠ ತೀರ್ಥೋತ್ಸವ, ಸಂಜೆ ತೊಟ್ಟಿಲಮಡುವಿನಲ್ಲಿ ಜಾತ್ರೆ ನಡೆಯಲಿದೆ.