

ಮೇಲುಕೋಟೆ : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥ ಖ್ಯಾತ ಕವಿ ಪುತಿನ ತವರೂರು ಮೇಲುಕೋಟೆಗೆ ಸೋಮವಾರ (ನ. 25) ಆಗಮಿಸಲಿದೆ, ರಥ ಮೇಲುಕೋಟೆಯ ಪಟ್ಟಣದ ಹೊರಭಾಗದಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಸಮೀಪ ಬೆಳಗ್ಗೆ 9ಕ್ಕೆ ಆಗಮಿಸಲಿದೆ. ಅಲ್ಲಿ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ನಂತರ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿರುವ ಸಾಹಿತ್ಯರಥವು ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳದ ಮಾಹಿತಿ ನೀಡಲಿದೆ. ರಥದ ಸುಗಮ ಸಂಚಾರ ಮತ್ತು ಭವ್ಯ ಸ್ವಾಗತಕ್ಕೆ ಗ್ರಾಮ ಪಂಚಾಯಿತಿ ಸಕಲ ವ್ಯವಸ್ಥೆ ಮಾಡಿಕೊಂಡಿದೆ.