ಮೇಲುಕೋಟೆ ಸನ್ನಿಧಿಯಲ್ಲಿ ಸಿಎಸ್‌ಪಿ ಪ್ರಚಾರಕ್ಕೆ ಚಾಲನೆ

IMG-20230412-WA0089
ಮೇಲುಕೋಟೆ ಸನ್ನಿಧಿಯಲ್ಲಿ ಶ಻ಸಕ ಸಿ.ಎಸ್.ಪುಟ್ಟರಾಜು ಪ್ರಚಾರಕ್ಕೆ ಚಾಲನೆ ನೀಡಿದರು.
Published on

ಮೇಲುಕೋಟೆ : ಶಾಸಕ ಸಿ.ಎಸ್. ಪುಟ್ಟರಾಜು ಮೇಲುಕೋಟೆ ಕ್ಷೇತ್ರದ ಶ್ರೀ ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಬುಧವಾರ ಚಾಲನೆ ನೀಡಿದರು.
ಇದೇ ವೇಳೆ ಚುನಾವಣಾ ಪ್ರಚಾರ ವಾಹನಕ್ಕೆ ಪೂಜೆ ಸಲ್ಲಿಸಿದ ಅವರು ಮಾತನಾಡಿ, ನಾನು ಕಳೆದ ದಶಕದಲ್ಲಿ ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗೆ ಮಾಡಿದ ಕಾರ್ಯಗಳನ್ನು ಮನೆ ಮನೆಗೆ ತಲುಪಿಸಬೇಕು. ಕೇವಲ ಪ್ರಚಾರಕ್ಕೆ ರಾಜಕೀಯ ಮಾಡುವುದರ ಬದಲು ಜನಸೇವಕನಾಗಿ ಕೆಲಸ ಮಾಡಬೇಕೆಂದು ಪಣ ತೊಟ್ಟು ಅಭಿವೃದ್ಧಿ ಮಾಡುತ್ತಾ ಬಂದಿದ್ದೇನೆ. ರಸ್ತೆ ಶಿಕ್ಷಣ ನೀರಾವರಿ, ಆರೋಗ್ಯ, ವಿದ್ಯುತ್ ಕ್ಷೇತ್ರ ಸೇರಿದಂತೆ ಮೇಲುಕೋಟೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕಾರ್ಯಕರ್ತರು ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ತಿಳಿಸಿ ಎಂದರು ಮೇಲುಕೋಟೆ ಏಕಶಿಲಾ ಗಣಪತಿಯ ಪೂಜೆಗೆ ತೆರಳಿದ ಸಿಎಸ್‌ಪಿಗೆ ಶುಭಶಕುನ ಎದುರಾಯಿತು. ಗಣಪನ ಬಲಭಾಗದ ಹೂ ಬೀಳುವ ಮೂಲಕ ಸಿಎಸ್‌ಪಿಗೆ ಶುಭಸೂಚನೆ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net