

ಅದ್ದೂರಿ ಸ್ವಾಗತ : ಸಚಿವರಾದ ನಂತರ ಮೇಲುಕೋಟೆಗೆ ಪ್ರಥಮ ಬಾರಿಗೆ ಆಗಮಿಸಿದ ಚಲುವರಾಯಸ್ವಾಮಿ ದಂಪತಿಯನ್ನು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಹಾಗೂ ರೈತಸಂಘದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿದರು. ಜಿ.ಪಂ. ಮಾಜಿ ಸದಸ್ಯರಾದ ಎಚ್.ಮಂಜುನಾಥ್, ಎಚ್.ತ್ಯಾಗರಾಜು, ಸಮಾಜಸೇವಕ ಕನಗೋನಹಳ್ಳಿ ಪರಮೇಶಗೌಡ, ರೈತನಾಯಕ ಹೊಸಕೋಟೆ ವಿಜಯಕುಮಾರ್, ರೈತಸಂಘದ ಉಪಾಧ್ಯಕ್ಷ ಈಶಮುರುಳಿ, ಕಾಡೇನಹಳ್ಳಿ ರಾಮಚಂದ್ರು, ಬೆಳ್ಳಾಳೆ ಯೋಗೀಶ್, ಕೆ.ಕುಬೇರ್, ಧನಂಜಯ, ಅಮೃತಿ ವಿಜೇಂದ್ರಮೂರ್ತಿ, ರೈತಸಂಘದ ಕೆ.ಎಸ್. ದಯಾನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಾಲೂಕು ಅಧ್ಯಕ್ಷ ಎಚ್. ಕೃಷ್ಣೇಗೌಡ ಚಿರಕುರಳಿ ರಮೇಶ್ ಇತರರು ಇದ್ದರು.