ಮೇರಿಹಿಲ್ ಹೆಲಿಪ್ಯಾಡ್‌ನಲ್ಲಿ ಸ್ವಾತಂತ್ರ್ಯೋತ್ಸವ

IMG-20210815-WA0091
Published on

ಮಂಗಳೂರು: ನಗರದ ಮೇರಿಹಿಲ್‌ನ ಹೆಲಿಪ್ಯಾಡ್‌ನಲ್ಲಿ ಜೋಗರ್ಸ್ ಪಾರ್ಕ್ ಸದಸ್ಯರಿಂದ ಸ್ವಾತಂತ್ರೊೃೀತ್ಸವ ಆಚರಿಸಲಾಯಿತು.
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ನಾಗೇಶ್ ರಾವ್ ಕಲ್ಯಾಣಪುರ ರಾಷ್ಟ್ರ ಧ್ವಜಾರೋಹಣಗೈದರು. ಮಕ್ಕಳಲ್ಲಿ ರಾಷ್ಟ್ರಪ್ರೇಮ ಮೈಗೂಡಿಸಿಕೊಳ್ಳಲು ಹಿರಿಯರು ಪ್ರೇರಣೆ ನೀಡಬೇಕು. ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಹಬಾಳ್ವೆ ಮಾಡಬೇಕು. ಸ್ವಾತಂತ್ರೃ ಹೋರಾಟಗಾರರನ್ನು ಸ್ಮರಿಸಿಕೊಂಡು ಅವರ ಆದರ್ಶ ಪಾಲನೆ ಮಾಡಿದಾಗ ಸ್ವಾತಂತ್ರೃ ದಿನಾಚರಣೆ ಸಾರ್ಥಕ್ಯವಾಗುತ್ತದೆ ಎಂದರು.
ಸಂಘಟಕ ಉಮೇಶ್ ಕುಲಾಲ್ (ಠಾಕ್ರೆ), ಮೋಹನದಾಸ್ ಮಾಡ, ಜೀವನ್, ಹರೀಶ್ ಮೋಟುಕಾನ, ಮಹೇಶ್ ಶೆಟ್ಟಿ, ರಾಜನ್, ರಾಧಾಕೃಷ್ಣ, ಮಂಜುನಾಥ್, ನವೀನ್ ಶೆಟ್ಟಿ, ದೀಪಕ್, ಡೋನಿ ಮಿನೇಜಸ್, ರೋಶನಿ ಕಾರ್ಯಪ್ಪ, ಲಿಖಿತಾ ಶೆಟ್ಟಿ, ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net