ಮೇಯಲು ಬಿಟ್ಟ 1 ಎಮ್ಮೆ ಕಡಿದ ದುರುಳರು

ಎಮ್ಮೆ
Published on

ಭಟ್ಕಳ: ತಾಲೂಕಿನ ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ತಲಾಂದ ಗ್ರಾಮದಲ್ಲಿ ಎಮ್ಮೆಯನ್ನು ಕಡಿದು, ಅದರ ತಲೆ ಮತ್ತೀತರ ಅವಯವಗಳನ್ನು ಬಾವಿಯಲ್ಲಿ ಎಸೆದು ಗೋಕಳ್ಳರು ಮತ್ತೆ ವಿಕೃತಿ ಮೆರೆದಿದ್ದಾರೆ.

ತಾಲೂಕಿನ ತಲಾಂದ ಗ್ರಾಮದ ಬೆಳಲಖಂಡದ ನಿವಾಸಿ ಮಂಜುನಾಥ ಸೋಮಯ್ಯ ಗೊಂಡ ಅವರಿಗೆ ಸೇರಿದ ಸುಮಾರು 50ಸಾವಿರ ರೂ ಮೌಲ್ಯದ ಎಮ್ಮೆಯನ್ನು ದುರಳರು ಕಡಿದಿದ್ದಾರೆ. ಮಂಗಳವಾರ ಸಂಜೆ ಮೇಯಲು ಬಿಟ್ಟ ಎಮ್ಮೆ ತಲಾಂದ ಹೊಳೆಯ ಸಮೀಪದಿಂದ ನಾಪತ್ತೆಯಾಗಿತ್ತು. ಮಂಜುನಾಥ ಗೊಂಡ ಮತ್ತು ಅವರ ಕುಟುಂಬದವರು ಸಾಕಷ್ಟು ಜಾಗದಲ್ಲಿ ಎಮ್ಮೆಗಾಗಿ ಹುಡುಕಾಟ ನಡೆಸಿದರು ಪತ್ತೆಯಾಗಿಲ್ಲ. 3 ತಿಂಗಳ ಹಿಂದೆಅಷ್ಟೆ ಎಮ್ಮೆ ಕರು ಹಾಕಿತ್ತು. ಮನೆಯಲ್ಲಿ ಕರುವಿನ ಕೂಗಾಟ ತಾಳಲಾರದೆ ಮತ್ತೆ ಎಮ್ಮೆಗಾಗಿ ಹುಡುಕಾಟ ನಡೆಸಿದ್ದಾರೆ. ತಲಾಂದ ರಸ್ತೆಯ ಬದಿಯಲ್ಲಿ ಕಾಲಿ ಗದ್ದೆಯಲ್ಲಿ ಎಮ್ಮೆಯ ಅವಶೇಷ ಪತ್ತೆಯಾಗಿದೆ. ಅಲ್ಲೆ ಪಕ್ಕದಲ್ಲಿ ಎಮ್ಮಯನ್ನು ಕಡಿದು ಅದರ ಮಾಂಸವನ್ನು ಬೇರ್ಪಡಿಸಿ ಚೀಲದಲ್ಲಿ ತುಂಬಿಕೊಂಡ ಹೋಗಿರುವ ಕುರುಹು ಪತ್ತೆಯಾಗಿದೆ. ಬಳಿಕ ಅದರ ತಲೆ, ಕಾಲು ಕರುಳು ಸೇರಿದಂತೆ ಇತರ ಅವಯವಗಳನ್ನು ಅಲ್ಲೆ ಪಕ್ಕದಲ್ಲಿ ಇದ್ದ ಬಾವಿಗೆ ಎಸೆದು ಕಳ್ಳರು ಪರಾರಿಯಾಗಿದ್ದಾರೆ.

ತಾಲೂಕಿನಲ್ಲಿ ಒಂದೊದು ಭಾಗದಲ್ಲೂ ಪ್ರತಿದಿನ ಸಾವಿರಾರೂ ಮೌಲ್ಯದ ಜಾನುವಾರುಗಳು ನಾಪತ್ತೆಯಾಗುತ್ತಿದ್ದು ಮನೆಯಲ್ಲೂ ಜಾನುವಾರು ಸುರಕ್ಷಿತವಾಗಿರುವದಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಬೇಟಿ ಮಹಜರು ನಡೆಸಿದ್ದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net