

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಹು-ಧಾ ಮಹಾನಗರ ಪಾಲಿಕೆ ಮೇಯರ್ ಜತೆ ಮಾತುಕತೆ-ಫೋನ್ ಇನ್ ಕಾರ್ಯಕ್ರಮ ಏ. 2ರಂದು ಬೆಳಗ್ಗೆ 11ರಿಂದ 12 ಗಂಟೆಯವರೆಗೆ ನಡೆಯಲಿದೆ.
ಅವಳಿ ನಗರದ ಜನರು ಕುಡಿಯುವ ನೀರು, ಕಸ ವಿಲೇವಾರಿ, ರಸ್ತೆ, ಬೀದಿದೀಪ, ಒಳಚರಂಡಿ ಸೇರಿ ಇನ್ನಿತರ ಸಮಸ್ಯೆಗಳ ಪರಿಹಾರಕ್ಕಾಗಿ ಕರೆ (ಮೊ. 8277802331, 82778 02334) ಮಾಡಬಹುದಾಗಿದೆ. ಹು-ಧಾ ಸಮಗ್ರ ಅಭಿವೃದ್ಧಿ ಕುರಿತು ಅಭಿಪ್ರಾಯ ಹಾಗೂ ಸಲಹೆ ಸೂಚನೆಗಳನ್ನು ನೀಡಬಹುದು. ಮೇಯರ್ ರಾಮಪ್ಪ ಬಡಿಗೇರ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದು ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು.
ಪಾಲಿಕೆ ವತಿಯಿಂದ ಪ್ರತಿ ತಿಂಗಳ ಮೊದಲ ಬುಧವಾರದಂದು ಫೋನ್ ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ.