ಮೇದಾರ ಕೇತೇಶ್ವರರು ಅಪರೂಪದ ಕಾಯಕಯೋಗಿ

Ketheshwara
Published on

ಚಿತ್ರದುರ್ಗ: ಬಿದಿರನ್ನೇ 12ನೇ ಶತಮಾನದಲ್ಲಿ ಕಾಯಕ ವಸ್ತುವಾಗಿ ಸ್ವೀಕರಿಸಿ, ದುಡಿದ ಹಣದಲ್ಲಿ ಹಸಿದ ಜಂಗಮರಿಗೆ ದಾಸೋಹ ನೀಡುತ್ತಿದ್ದ ಅಪರೂಪದ ಕಾಯಕಯೋಗಿ ಮೇದಾರ ಕೇತೇಶ್ವರ ಶರಣರು ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಶ್ರೀ ಬಣ್ಣಿಸಿದರು.

ಶ್ರೀಮಠದ ಮುರುಗಿ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಅವರ ಲೀಲಾವಿಶ್ರಾಂತಿ ತಾಣ ಮುಂಭಾಗ ಸೋಮವಾರ ಹಮ್ಮಿಕೊಂಡಿದ್ದ ಶಿವಶರಣ ಮೇದಾರ ಕೇತಯ್ಯ ಜಯಂತಿಯಲ್ಲಿ ಮಾತನಾಡಿದರು.

ಬಸವಣ್ಣ ಅವರ ಅತ್ಯಾಪ್ತ ಶರಣರಲ್ಲಿ ಕೇತಯ್ಯ ಒಬ್ಬರಾಗಿದ್ದರು. ಅವರ ಕಾಯಕ ಮತ್ತು ದಾಸೋಹ ಪ್ರಜ್ಞೆ ನಾವೆಲ್ಲರೂ ಮೈಗೂಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಇಮ್ಮಡಿ ಬಸವ ಮೇದಾರ ಕೇತೇಶ್ವರ ಶ್ರೀ ಮಾತನಾಡಿ, ಕಾಯಕ ನಿಷ್ಠೆಯ ಕೇತಯ್ಯ ಅವರು ಒಲಿದ ಬಂಗಾರವನ್ನು ಧೂಳಿಗೆ ಸಮ ಎಂದು ತಿರಸ್ಕರಿಸಿದ ಮಹನೀಯ ಎಂದು ಬಣ್ಣಿಸಿದರು.

ಮಹಾಂತ ಶ್ರೀ, ಸರ್ದಾರ್ ಸೇವಾಲಾಲ್ ಶ್ರೀ, ಲಲಿತಮ್ಮ, ಸಹ ಶಿಕ್ಷಕ ಸಿ.ಎಂ.ತಿಪ್ಪೇರುದ್ರಪ್ಪ, ಶಿಕ್ಷಕ ಕೆ.ಜಯಪ್ಪ, ಬಿ.ವಸಂತಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net