

ಬಾಗಲಕೋಟೆ: ಪ್ರತಿಷ್ಠಿತ ಬಿ.ವಿ.ವಿ.ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆ ಶಿವಾಲಯ ಆವರಣದಲ್ಲಿ ಶನಿವಾರ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಬೆಳಗಿನ ಜಾವ ಶಿವನಿಗೆ ಹಾಗೂ ಶ್ರೀ ಗಂಗಮ್ಮದೇವಿಗೆ ಪಂಚಾಮೃತ ಅಭಿಷೇಕ,ರುದ್ರಾಭಿಷೇಕ,ವಿಶೇಷ ಪುಷ್ಪಾಲಂಕಾರ, ಮಹಾ ಮಂಗಳಾರುತಿ ಮಾಡಲಾಯಿತು. ಪೂಜೆಯಲ್ಲಿ ಪಾಲ್ಘೋಂಡು ಲೋಕ ಕಲ್ಯಾಣಾರ್ಥ ಸಕಾಲಕ್ಕೆ ಮಳೆಯಾಗಿ ಉತ್ತಮ ಬೆಳೆ ಬೆಳೆದು ಲೋಕವೆಲ್ಲಾ ಸಮೃದ್ಧಿಯಾಗಲೆಂದು ಪ್ರಾರ್ಥಿಸಲಾಯಿತು.
ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ (ಬೇವೂರ), ವೀರಣ್ಣ ಹಲಕುರ್ಕಿ,ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ಸೇರಿದಂತೆ ಅನೇಕರು ಇದ್ದರು.