ಮೇಘನಾ ಭಾರತ ತಂಡದ ಉಪನಾಯಕಿ

1 gkp 01
Published on


ಮಂಡ್ಯ : ಸೆ.3ರಂದು ಸಿಂಗಾಪುರದಲ್ಲಿ ನಡೆಯಲಿರುವ ಅಂತಾರಾಷ್ಟ್ರಿಯ ಏಷಿಯನ್ ನೆಟ್‌ಬಾಲ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದ ಉಪನಾಯಕಿಯಾಗಿ ಬಿ.ಸಿ.ಮೇಘನಾ ಆಯ್ಕೆಯಾಗಿದ್ದಾರೆ.
ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಎಂಕಾಂ ವ್ಯಾಸಂಗ ಮಾಡುತ್ತಿರುವ ಮೇಘನಾ ಕರ್ನಾಟಕ, ತೆಲಂಗಾಣ, ತಮಿಳುನಾಡು, ಹರ್ಯಾಣ, ಹಿಮಾಚಲ ಪ್ರದೇಶ, ಛತ್ತಿಸ್‌ಗಡ್‌ನಲ್ಲಿ ನಡೆದ ನೆಟ್‌ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ಎರಡು ಕಂಚಿನ ಪದಕ ಪಡೆದಿದ್ದಾರೆ. ಈಕೆ ಗೋಣಿಕೊಪ್ಪ ನಿವಾಸಿ ಬಿ.ಎ.ಚನ್ನಪ್ಪ ಪೂಜಾರಿ ಹಾಗೂ ಬಿ.ಸಿ.ನಳಿನಾಕ್ಷಿ ದಂಪತಿ ಪುತ್ರಿ. ಎಚ್.ರಮೇಶ್, ಸುದೀನಾ ಪೂಜಾರಿ, ನಿತಿನ್ ಪೂಜಾರಿ, ಶಾರದ ಬರ್ಕೋರ್ ಇವರ ತರಬೇತುದಾರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net