ಮೇಕೆದಾಟು ನಡಿಗೆ ಇಂದು ಬಿಡದಿ ಕಡೆಗೆ

Kailancha-Ph-01-Mekedatu Padayatre Kailancha Hobali Road-12-1-2022
Published on

ಕೈಲಾಂಚ: ಮಂಗಳವಾರ ರಾತ್ರಿ ಕನಕಪುರ ತಾಲೂಕಿನ ಗಡಿಗ್ರಾಮ ಚಿಕ್ಕೇನಹಳ್ಳಿ ತಲುಪಿದ್ದ ಪಾದಯಾತ್ರೆ ಬುಧವಾರ ಬೆಳಗ್ಗೆ ರಾಮನಗರ ತಾಲೂಕಿನ ಗಡಿ ಪ್ರವೇಶಿಸಿತು.

ಬೆಳಗ್ಗೆ 11 ಗಂಟೆಗೆ ಆರಂಭಗೊಂಡ ಪಾದಯಾತ್ರೆ ಕೈಲಾಂಚ ಹೋಬಳಿಯ ಕೋಟಹಳ್ಳಿಗೆ ಆಗಮಿಸುತ್ತಿದ್ದಂತೆ ರಾಮನಗರ ತಾಲೂಕಿನ ಕಾಂಗ್ರೆಸ್ ಮುಖಂಡರು ಅದ್ದೂರಿ ಸ್ವಾಗತ ಕೋರಿದರು. ಚನ್ನಪಟ್ಟಣ, ಕನಕಪುರ ತಾಲೂಕು, ರಾಮನಗರ ವಿಧಾನಸಭಾ ಕ್ಷೇತ್ರ ಸೇರಿ ಚಿಕ್ಕಬಳ್ಳಾಪುರ, ಹಾಸನ, ಬಳ್ಳಾರಿ ಜಿಲ್ಲೆಗಳು ಹಾಗೂ ಹರಪನಹಳ್ಳಿ, ಗೌರಿಬಿದನೂರು ವಿಧಾನಸಭಾ ಕ್ಷೇತ್ರಗಳ 10 ಸಾವಿರಕ್ಕೂ ಹೆಚ್ಚು ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.ಮೇಕೆದಾಟು ಪಾದಯಾತ್ರೆ ನೇತೃತ್ವ ವಹಿಸಿರುವ ಡಿ.ಕೆ.ಶಿವಕುವಾರ್ ಸೇರಿ ವಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಪ್ರಿಯಾಂಕ ಖರ್ಗೆ, ಮುಖಂಡರಾದ ಧ್ರುವನಾರಾಯಣ್, ಸಲೀಂ ಅಹಮದ್, ವಾಜಿ ಶಾಸಕ ಕೆ.ರಾಜು, ಇಕ್ಬಾಲ್ ಹುಸೇನ್ ಸೇರಿ ಪಕ್ಷದ ಇತರ ಶಾಸಕರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಹುಲಿಕೆರೆ-ಗುನ್ನೂರು ಗ್ರಾಪಂ ಕಾಂಗ್ರೆಸ್ ಮುಖಂಡರು ಅವ್ವೇರಹಳ್ಳಿಯಲ್ಲಿ ಡಿ.ಕೆ.ಶಿವಕುವಾರ್ ಅವರನ್ನು ಎತ್ತಿನ ಗಾಡಿ ಮೇಲೆ ನಿಲ್ಲಿಸಿ ಹೂಮಳೆಗೆರೆದರು. ಕೆಪಿ ದೊಡ್ಡಿ ಗ್ರಾಮದಲ್ಲಿ ಹುಣಸನಹಳ್ಳಿಯಲ್ಲಿ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಿದರು. ಕೈಲಾಂಚ ಗೇಟ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುವಾರ್ ಅವರಿಗೆ ಜೆಸಿಬಿ ಮುಖಾಂತರ ಮೇಲಿಂದ ಪುಷ್ಪವೃಷ್ಟಿ ಮಾಡಲಾಯಿತು. ಚನ್ನವಾನಹಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಬನ್ನಿಕುಪ್ಪೆ, ವಿಭೂತಿಕೆರೆ ಗ್ರಾಪಂ ಮುಖಂಡರು ಡಿ.ಕೆ. ಶಿವಕುವಾರ್‌ಗೆ ಪುಷ್ಪವಾಲೆ ಹಾಕಿದರು. ಪಾದಯಾತ್ರೆ ಸಾಗುವ ವಾರ್ಗದಲ್ಲಿ ತಳಿರು ತೋರಣಗಳು, ನಾಯಕರ ಪ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಹಲವು ಗ್ರಾಮಗಳಲ್ಲಿ ಮಹಿಳೆಯರು ಪೂರ್ಣಕುಂಭದೊಂದಿಗೆ ಪಾದಯಾತ್ರೆಗೆ ಸ್ವಾಗತ ಕೋರಿದರು. ಪಾದಯಾತ್ರೆಯಲ್ಲಿ ಬರುವ ಜನರಿಗೆ ಮಧ್ಯಾಹ್ನದ ಊಟ, ವಿಶ್ರಾಂತಿಗಾಗಿ ಕೆ.ಪಿ.ದೊಡ್ಡಿ ಬಳಿಯ ಕೆಂಪೇಗೌಡನದೊಡ್ಡಿ ಗ್ರಾಮದ ಹತ್ತಿರದ ಖಾಸಗಿ ಜಮೀನಿನಲ್ಲಿ ಬೃಹತ್ ಶಾಮಿಯಾನ ವ್ಯವಸ್ಥೆ ಮಡಲಾಗಿತ್ತು.

ಊಟಕ್ಕೆ ಮುಗಿಬಿದ್ದ ಜನರು: ಊಟಕ್ಕೆ ಅನ್ನ, ಮುದ್ದೆ, ಅವರೆಕಾಳು ಸಾಂಬಾರ್, ಮೊಟ್ಟೆ ಜತೆಗೆ ಸ್ವೀಟ್ ವಾಡಲಾಗಿತ್ತು. ಒಮ್ಮೆಲೇ ಜನರು ಊಟಕ್ಕಾಗಿ ಕೌಂಟರ್‌ಗಳಿಗೆ ಮುಗಿಬಿದ್ದಾಗ ಕೆಲ ಹೊತ್ತು ನೂಕುನುಗ್ಗಲು ಉಂಟಾಯಿತು. ನಂತರ ಊಟದ ಉಸ್ತುವಾರಿ ಹೊತ್ತಿದ್ದ ಸ್ಥಳೀಯ ಮುಖಂಡರು ಪ್ರತಿ ಕೌಂಟರ್‌ಗಳ ಬಳಿ ನಿಂತು ಊಟ ವಿತರಣೆ ಸುಗಮಗೊಳಿಸಿದರು.

ಕಳ್ಳರ ಕೈ ಚಳಕ: ಪಾದಯಾತ್ರೆ ಸಾಗುವ ಗ್ರಾಮಗಳ ಬಳಿ ನಾಯಕರಿಗೆ ಹಾರ ಹಾಕಿ ಸ್ವಾಗತ ಕೋರುವ ಸಂದರ್ಭದಲ್ಲಿ ಉಂಟಾದ ನೂಕು-ನುಗ್ಗಲಿನ ಲಾಭ ಪಡೆದುಕೊಂಡ ಕಳ್ಳರು ಅವ್ವೇರಹಳ್ಳಿರ ವಾರೇಗೌಡ, ಗ್ರಾಪಂ ಸದಸ್ಯ ನಾಗೇಶ್, ಶ್ರೀನಿವಾಸ್ ದಾಸರಹಳ್ಳಿ ಸೋಮಶೇಖರ್, ಅಪ್ಪಾಜಿ ಎಂಬುವವರ ಜೇಬು ಕಟ್ ಮಡಿ ಹಣ, ಮತ್ತೆ ಕೆಲವರ ಮೊಬೈಲ್ ಎಗರಿಸಿದ್ದಾರೆ.

ಚಿಕ್ಕೇನಹಳ್ಳಿಯಿಂದ ಕೆಂಪೇಗೌಡನದೊಡ್ಡಿವರೆಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನದ ಊಟ, ವಿಶ್ರಾಂತಿ ನಂತರ ಕೆಂಪೇಗೌಡನದೊಡ್ಡಿಯಿಂದ ಬೆಂಗಳೂರಿನತ್ತ ಹೊರಟರು.

ಸಿದ್ದು ವಾಪಸ್

ಪಾದಯಾತ್ರಿಗಳಿಗೆ ಮಜ್ಜಿಗೆ, ಸೇಬು, ಬಾಳೆ, ಕಿತ್ತಳೆ, ಮೊಸಂಬಿ ಹಣ್ಣು, ಹುರಿದ ಕಡಲೆಕಾಯಿ, ಕಾಫಿ, ಟೀ, ಕಬ್ಬಿನ ಹಾಲು, ನೀರಿನ ಪ್ಯಾಕೆಟ್‌ಗಳು, ಸಂಜೆ ಮೆಣಸಿನಕಾಯಿ ಬಜ್ಜಿ ಹಂಚಲಾಯಿತು. ತೆಂಗಿನಕಲ್ಲು ಗ್ರಾಮದ ರೈತರು ಸುವಾರು 250ಕ್ಕೂ ಹೆಚ್ಚಿನ ಬಾಳೆಗೊನೆಗಳನ್ನು ಪಾದಯಾತ್ರೆಯಲ್ಲಿ ಬಂದವರಿಗೆ ಹಂಚಿದರು.

ಪಾದಯಾತ್ರಿಗಳಿಗೆ ಬಾಳೆಹಣ್ಣು

ಟ್ರಾಫಿಕ್ ಜಾಮ್: ಕನಕಪುರ-ರಾಮನಗರ ರಸ್ತೆಯಲ್ಲಿ ಸದಾಕಾಲ ವಾಹನ ದಟ್ಟಣೆಯಿರುತ್ತದೆ. ಬುಧವಾರ ಪಾದಯಾತ್ರೆಯಿಂದ ರಾಮನಗರದಿಂದ ಚಿಕ್ಕೇನಹಳ್ಳಿವರೆಗೂ ವಾಹನಗಳ ಸಾಲು, ಪಾದಯಾತ್ರೆಗೆ ಬಂದ ಜನರೇ ಕಾಣಿಸುತ್ತಿದ್ದರು. ಪ್ರತಿನಿತ್ಯ ಸಂಚರಿಸುವ ಬಸ್‌ಗಳು, ವಾಹನಗಳು, ದ್ವಿಚಕ್ರ ವಾಹನ ಸವಾರರು ಪರ್ಯಾಯ ರಸ್ತೆ ಕಾಣದೆ ಗಂಟೆಗಟ್ಟಲೆ ಕಾಯಬೇಕಾಯಿತು.

ಸನ್ಮಾನ: ಸಂಗಮದಿಂದ ಎರಡು ಬಿಂದಿಗೆಯಲ್ಲಿ ಬೆಂಗಳೂರಿಗೆ ಪಾದಯಾತ್ರೆಯಲ್ಲಿ ನೀರು ಹೊತ್ತು ತರುತ್ತಿರುವ ಹುಸೇನ್ ಎಂಬುವವರಿಗೆ ಕೆ.ಪಿ ದೊಡ್ಡಿ ಗ್ರಾಮದಲ್ಲಿ ಪರಿಸರ ಪ್ರೇಮಿ ರಾಜೇಂದ್ರ ಅವರು ಶಾಲು, ಹಾರ, ಪೇಟ ತೊಡಿಸಿ ಸನ್ಮಾನಿಸಿದರು.

ಕಲಾ ತಂಡಗಳ ವೈಭವ: ಆರಂಭದಿಂದಲೂ ಕಲಾ ತಂಡಗಳು ಪಾದಯಾತ್ರೆಗೆ ಮೆರುಗು ನೀಡುತ್ತಿವೆ. ಗಾರುಡಿಗೊಂಬೆ, ತಮಟೆ, ಪೂಜಾ ಕುಣಿತ, ಡೊಳ್ಳು, ಪಟ ಕುಣಿತ ಮತ್ತಿತರ ಕಲಾ ತಂಡಗಳು ಪಾದಯಾತ್ರೆಯ ಆಕರ್ಷಣೆಯಾಗಿದ್ದವು.

ಹುರುಪು: ನಾಲ್ಕನೇ ದಿನದ ಪಾದಯಾತ್ರೆಯಲ್ಲಿ ಭಾಗವಹಿಸಿದ ನಾಯಕರಲ್ಲಿ ಜನರಲ್ಲಿ ಹುರುಪು ಕಾಣುತ್ತಿತ್ತು. ಬಹಳ ಉತ್ಸುಕವಾಗಿಯೇ ಜನರ ಜೊತೆ ನಾಯಕರು ಹೆಜ್ಜೆ ಹಾಕುತ್ತಿದ್ದರು. ಇಂದು ಕೂಡ ಮಹಿಳೆಯರು, ಯುವಕರು ಪಾದಯಾತ್ರೆಯಲ್ಲಿ ಹೆಚ್ಚಾಗಿಯೇ ಕಂಡು ಬಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net