ಮೇಕೆಗಳಿಗೆ ಸಮರ್ಪಕ ಲಸಿಕೆ ಕೊಡಿಸಿ

meke
Published on

ಆಳಂದ: ಮೇಕೆ ಸಾಕಣೆ ಅತ್ಯಧಿಕ ಲಾಭದಾಯಕ ಉದ್ಯಮವಾಗಿದೆ. ಹೀಗಾಗಿ ಜನರು ಮೇಕೆಗಳ ಆರೋಗ್ಯದತ್ತ ಹೆಚ್ಚಿನ ನಿಗಾ ವಹಿಸಬೇಕು. ಕಾಲಕಾಲಕ್ಕೆ ಅಗತ್ಯ ಲಸಿಕೆಗಳನ್ನು ನೀಡಬೇಕು. ಅಂದಾಗಲೇ ಉತ್ತಮ ಲಾಭ ತಂದುಕೊಡಲು ಸಾಧ್ಯ ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಂಜಯ ರೆಡ್ಡಿ ಹೇಳಿದರು.
ತಾಲೂಕಿನ ಹಿರೊಳ್ಳಿ ಗ್ರಾಮದಲ್ಲಿ ದಿ ನಡ್ಜ್ ಹಾಗೂ ಪಶು ಸಂಗೋಪನಾ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಜಂತುಹುಳು ನಿವಾರಣೆ ಹಾಗೂ ಲಸಿಕಾ ವಿತರಣೆ ಶಿಬಿರದಲ್ಲಿ ಮಾತನಾಡಿ, ದಿ ನಡ್ಜ್ ಸಂಸ್ಥೆ ಹಳ್ಳಿ-ಹಳ್ಳಿಗೂ ಸಂಚರಿಸಿ ಸಾಕು ಪ್ರಾಣಿಗಳ ಆರೋಗ್ಯ ಕಾಪಾಡಲು ಶ್ರಮಿಸುತ್ತಿದೆ. ಜನರು ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ದಿ ನಡ್ಜ್ ಸಂಸ್ಥೆ ಕರ್ನಾಟಕ ತಂಡದ ಹಿರಿಯ ಮುಖ್ಯಸ್ಥ ನಾಗರಾಜ ಹೆಂಬಾಡಿ ಮಾತನಾಡಿ, ದಿ ನಡ್ಜ್ ಸಂಸ್ಥೆ ಕಳೆದ ೩ ವರ್ಷಗಳಿಂದ ೮೧ ಸಾವಿರಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳನ್ನು ಬಡತನದಿಂದ ಹೊರತರಲು ಶ್ರಮಿಸಿದೆ. ಸದ್ಯ ಕಲಬುರಗಿ ಜಿಲ್ಲೆಯ ಆಳಂದ, ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ೭೧೦ ಮಹಿಳಾ ಪ್ರಧಾನ ಕುಟುಂಬಗಳನ್ನು ಬಡತನಮುಕ್ತವಾಗಿ ಮಾಡಲಾಗುತ್ತಿದೆ. ಬಡ ಕುಟುಂಬಗಳಿಗೆ ಕುರಿ ಸಾಕಣೆ ಬಗ್ಗೆ ಅರಿವು, ಸಣ್ಣ ವ್ಯಾಪಾರಕ್ಕೆ ಸಹಕಾರ ನೀಡುವುದು ಸೇರಿ ಇನ್ನಿತರ ಯೋಜನೆಗಳನ್ನು ನೀಡಲಾಗುತ್ತಿದೆ. ಗ್ರಾಮಗಳು ಅಭಿವೃದ್ಧಿಯಾಗಿ ಬಡತನ ನಿರ್ಮೂಲನವಾಗಲಿ ಎಂಬುದು ಸಂಸ್ಥೆ ಉz್ದೆÃಶ ಎಂದು ಹೇಳಿದರು.

ಮಟಕಿಯಲ್ಲಿ ೨೨ ಕುಟುಂಬಗಳಿಗೆ ೩೬ ಮೇಕೆ ವಿತರಿಸಲಾಯಿತು. ಹಿರೊಳ್ಳಿಯಲ್ಲಿ ೨೩ ಕುಟುಂಬಗಳ ೩೬ ಮೇಕೆಗಳಿಗೆ ಜಂತುಹುಳು ನಿವಾರಣೆ ಲಸಿಕೆ ನೀಡಲಾಯಿತು. ಕಿರಿಯ ಪಶು ವೈದ್ಯಕೀಯ ಪರೀP್ಷÀಕ ಮಹಾದೇವ ಮಂಠಾಳ, ಪ್ರಮುಖರಾದ ಲಕ್ಷಿö್ಮÃ ಕುಂಬಾರ, ಸೋಮನಾಥ ದಿಗಂಬರ್, ಖಾಜಪ್ಪ, ಶಾಂತಪ್ಪ, ದಯಾನಂದ, ಶಿವರಾಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net