ಮೇಕೆ ಹಾಲು ಘಟಕ ಕಾಮಗಾರಿ ಪ್ರಗತಿ

11Kush03
Published on

ಕುಶಾಲನಗರ: ಮೇಕೆ ಹಾಲು ಘಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡಿದ್ದು, ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ರಾಜ್ಯ ಕುರಿ ಉಣ್ಣೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಣ್ಣ ಹೇಳಿದರು.
ಕೂಡಿಗೆಯಲ್ಲಿ ನಿರ್ಮಾಣ ಹಂತದಲ್ಲಿರುವ ಘಟಕಕ್ಕೆ ಇತ್ತೀಚೆಗೆ ಭೇಟಿ ನೀಡಿದ ಅವರು ಮಾತನಾಡಿ, ಮೇಕೆ ಸಾಕುವ ಕೃಷಿಕರಿಗೆ ಇದು ಭರವಸೆಯ ಕೇಂದ್ರವಾಗಲಿದೆ ಎಂದರು.
ಘಟಕದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. 112 ಎಕರೆ ಪ್ರದೇಶವನ್ನು ಸೂಕ್ತವಾಗಿ ಬಳಸಿಕೊಂಡು ಯಂತ್ರೋಪಕರಣಗಳನ್ನು ಅಳವಡಿಸಲಾಗುತ್ತಿದೆ. ಹುಲ್ಲು ಸಂಗ್ರಹಣಾ ಘಟಕದ ಕೆಲಸ ಅಂತಿಮ ಹಂತದಲ್ಲಿದೆ ಎಂದರು.
ಮೈಸೂರು-ಕೊಡಗು ಕುರಿ ಉಣ್ಣೆ ನಿಗಮದ ನಿರ್ದೇಶಕ ಡಾ.ನಾಗರಾಜ್, ಇಲಾಖೆಯ ರಾಜೇಗೌಡ, ಉಣ್ಣೆ ಸಹಕಾರ ನಿಗಮದ ಜಿಲ್ಲಾಧ್ಯಕ್ಷ ಡಿ.ಆರ್. ಪ್ರಭಾಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net