ಮೇಕೆ ಮೇಲೆ ಚಿರತೆ ದಾಳಿ

Published on

ತುರುವೇಕೆರೆ:ತಾಲೂಕಿನ ದಂಡಿನಶಿವರ ಹೋಬಳಿಯ ಅಮ್ಮಸಂದ್ರ ಗ್ರಾಮದ ತೋಟವೊಂದರಲ್ಲಿ ಮೇಯುತ್ತಿದ್ದ ಮೇಕೆ ಮೇಲೆ ಚಿರತೆ ದಾಳಿ ಮಾಡಿದೆ. ಗ್ರಾಮದ ರೈತ ಮುರಳಿ ಗ್ರಾಮ ಹೊರವಲಯದ ತೋಟದಲ್ಲಿ ಶನಿವಾರ ಮಧ್ಯಾಹ್ನ ಮೇಕೆಗಳನ್ನು ಮೇಯಿಸುತ್ತಿದ್ದಾಗ ಪೊದೆಯೊಳಗಿನಿಂದ ಬಂದ ಚಿರತೆ ಮೇಕೆ ಮೇಲೆ ದಾಳಿ ಮಾಡಿದ್ದು, ಈ ವೇಳೆ ಉಳಿದ ಮೇಕೆಗಳು ಬೆದರಿ ಚೆಲ್ಲಾಪಿಲ್ಲಿಯಾಗಿವೆ. ಚಿರತೆ ಕಂಡ ಮುರುಳಿ ಕೂಗಾಡಿದ್ದು, ಮೇಕೆ ಬಿಟ್ಟು ಚಿರತೆ ಓಡಿ ಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net