ಮೇ 9ರಿಂದ ಸಾಮೂಹಿಕ ಪಾರಾಯಣ, ಹರಿನಾಮ ಸಪ್ತಾಹ

1010
Published on

ಸಂಬರಗಿ: ಸಮೀಪದ ಜಂಬಗಿ ಗ್ರಾಮದಲ್ಲಿ ಮೇ 9ರಿಂದ 15ರ ವರೆಗೆ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಸಾಮೂಹಿಕ ಪಾರಾಯಣ ಮತ್ತು ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ಯೋಜಿಸಲಾಗಿದೆ.

ಪ್ರತಿದಿನ ಬೆಳಗ್ಗೆ 4 ಗಂಟೆಯಿಂದ 6ಗಂಟೆಯ ವರೆಗೆ ಆರತಿ, ಜ್ಞಾನೇಶ್ವರಿ ವಾಚನ, ಸಂಜೆ ಕೀರ್ತನ ಜರುಗಲಿದೆ. ಮೇ 9ರಂದು ಬೆಳಗ್ಗೆ ಪ್ರವಚನ, ಸಂಜೆ ಪಂಡರಪುರದ ಗುರುವರ್ಯ ಗೋಪಾಲ ವಾಸ್ಕರ್ ಮಹಾರಾಜರಿಂದ ಕೀರ್ತನೆ, ಮೇ 10ರಂದು ಹುನ್ನೂರ ಬಸು ಹೂಳೂರ ಮಹಾರಾಜರಿಂದ ಕೀರ್ತನೆ, ಮೇ 11ರಂದು ಯಲ್ಲಹಡಗಿ ವಿಲಾಸ ಮನೋಹರ ಬಾಬರ ಮಹಾರಾಜರಿಂದ ಕೀರ್ತನೆ

ಮೇ 12ರಂದು ಶಿರೂರ ತುಕಾರಾಂ ಹಜಾರೆ ಮಹರಾಜರಿಂದ ಕೀರ್ತನೆ, ಮೇ 13ರಂದು ಶಿರೂರ ಅಪ್ಪಾಸಾಹೇಬ ಪಾಟೀಲ ಮಹಾರಾಜರಿಂದ ಕೀರ್ತನೆ, ಮೇ 14ರಂದು ಪಂಡರಪುರ ಗುರುವರ್ಯ ಚೈತನ್ಯ ವಾಸ್ಕರ್ ಮಹರಾಜರಿಂದ ಕೀರ್ತನೆ.

ಮೇ 15ರಂದು ಬೆಳಗ್ಗೆ 10 ಗಂಟೆಯಿಂದ 12ರ ವರೆಗೆ ಕರೋಲಿಯ ಕೃಷ್ಣ ಪಾಟೀಲ ಮಹಾರಾಜರಿಂದ ಕೀರ್ತನೆ ಹಾಗೂ ದಿಂಡಿ ಸಮಾರಂಭ ಜರುಗಲಿದೆ. ಪ್ರತಿದಿನ ಎರಡು ಬಾರಿ ಮಹಾಪ್ರಸಾದ ಕಾರ್ಯಕ್ರಮ ಆಯೋಜಿಸಿದೆ ಎಂದು ಗ್ರಾಮಸ್ಥರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net