ಮೇ.14 ರಂದು ನವೋದ್ಯಮ ಸಭೆ

IMG-20250512-WA0020
Published on

ಮೇ.14 ರಂದು ನವೋದ್ಯಮ ಸಭೆ

ಬೆಳಗಾವಿ

ದಲಿತ ಉದ್ಯಮಿದಾರರು ಹೆಚ್ಚಾಗಬೇಕೆಂಬ ಉದ್ದೇಶದಿಂದ ಇದೇ ಮೇ.14 ರಂದು ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ನವೋದ್ಯಮ ಸಭೆ‌ ಆಯೋಜಿದಲಾಗಿದೆ ಎಂದು ಕರ್ನಾಟಕ ದಲಿತ ಉದ್ಯಮಿ ಸಂಘರ್ಷ ಸಮಿತಿಯ ಅರವಿಂದ ಗಟ್ಟಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನವ ಉದ್ಯಮಿಯಾಗ ಬಯಸುವವರು ತಮ್ಮ ಭಾವಚಿತ್ರದೊಂದಿಗೆ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇದರ ಲಾಭವನ್ನು ದಲಿತ ಹೊಸ‌ ಉದ್ಯಮಿಗಳು ಪಡೆಯಬೇಕು ಎಂದರು.

ದಲಿತ ಉದ್ಯಮಿಗಳು‌ ಯುವ ಉದ್ಯಮಿಗಳಿಗೆ ಸಹಾಯ, ಸಹಕಾರ ಕೊಡಬೇಕು. ಜಿಲ್ಲೆಯಲ್ಲಿಯ ದೊಡ್ಡ ದೊಡ್ಡ ‌ದಲಿತ ನಾಯಕರು ಯಶಶ್ವಿಯಾಗಿದ್ದಾರೆ. ಯುವ ದಲಿತ ಉದ್ಯಮಿಗಳು ಅವರಂತೆ ಬೆಳೆಯಬೇಕು ಎಂದರು.

ಶಿವಾನಂದ ಸಂಜೀವಗೋಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net