ಮೇ 12 ರಂದು ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ

Published on

ಬಳ್ಳಾರಿ : ಸಂಗಂ ಮತ್ತು ಅರಿವು ಸಂಸ್ಥೆಗಳ ವತಿಯಿಂದ ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭವನ್ನು ಮೇ 12 ಭಾನುವಾರ ರಂದು ಇಲ್ಲಿನ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
2023ನೇ ವರ್ಷದ ಸಂಗಂ ಸಾಹಿತ್ಯ ಪುರಸ್ಕಾರವನ್ನು 2021 -23 ರ ವರೆಗೆ ಪ್ರಕಟಗೊಂಡ ಅತ್ಯುತ್ತಮ ಕಥಾ ಸಂಕಲನಗಳಿಗೆ ಈ ವರ್ಷದ ಪುರಸ್ಕಾರವನ್ನು ನೀಡಲಾಗುತ್ತಿದೆ. ಅಂತಿಮ ಹಂತದಲ್ಲಿ ಕಥೆಗಾರರಾದ ಅನಿಲ್ ಗುನ್ನಾಪುರ, ಸ್ವಾಮಿ ಪೊನ್ನಾಚಿ , ಸಂಪತ್ ಸಿರಿಮನೆ, ಅನುಪಮಾ ಪ್ರಸಾದ ಮತ್ತು ದಯಾನಂದ ಇದ್ದಾರೆ. ಇವರಲ್ಲಿ ಒಬ್ಬರಿಗೆ ಸಂಗಂ ಸಾಹಿತ್ಯ ಪುರಸ್ಕಾರ ಹಾಗೂ ಉಳಿದವರಿಗೆ ಸಂಗಂ ಅಂತಿಮ ಸುತ್ತಿನ ಗೌರವ ನೀಡಿ ಪುರಸ್ಕರಿಸಲಾಗುವುದು.
ಸಂಗಂ ಸಾಹಿತ್ಯ ಪುರಸ್ಕಾರ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಪಟೇಲ್, ಡಾ .ನಿಷ್ಠಿ ರುದ್ರಪ್ಪ , ಆರಿಫ್ ರಾಜ, ಸಮಿತಿಯ ಸಂಚಾಲಕರಾದ ಡಾ. ಕೆ .ಶಿವಲಿಂಗಪ್ಪ ಹಂದಿಹಾಳು , ವೀರೇಂದ್ರ ರಾವಿಹಾಳ್, ಪ್ರೊ. ದಸ್ತಗೀರಸಾಬ್ ದಿನ್ನಿ ಮುಂತಾದವರು ಉಪಸ್ಥಿತಿರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net