ಮೇ.1 ರಂದು ನನಗನಿಸಿದ್ದು ಕೃತಿ ಬಿಡುಗಡೆ

Published on

ಚಾಮರಾಜನಗರ: ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು(ಮಹಿಳಾ ಘಟಕ) ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಮೇ.1 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಹಾಗೂ ಡಾ.ಪಿ.ಪ್ರೇಮ ಅವರ ‘ನನಗನಿಸಿದ್ದು’ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ನಗರದ ರೋಟರಿ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಗೀತಾ ಹುಡೇದಾ ಉದ್ಘಾಟಿಸುವರು. ಮೈಸೂರಿನ ಮಹಿಳಾ ಚಿಂತಕಿ ಡಾ.ಪದ್ಮಶ್ರೀ ಕೃತಿ ಬಿಡುಗಡೆ ಮಾಡುವರು. ರಾಜ್ಯ ಸಕರ್ಅರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಡಾ.ರೇಣುಕಾದೇವಿ ಅಧ್ಯಕ್ಷತೆವಹಿಸುವರು. ಜಿಲ್ಲಾ ಸಾರಿಗೆ ಅಧಿಕಾರಿ ಗಾಯಿತ್ರಿ, ದಲಿರ ಸಾಹಿತ್ಯ ಪರಿಷತ್ತು ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಡಾ.ಕವಿತಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ರೋಟರಿ ಸಂಸ್ಥೆ ಅಧ್ಯಕ್ಷ ನಾಗರಾಜ್ ಅವರನ್ನು ಸನ್ಮಾನಿಸಲಾಗುವುದು. ದಸಾಪ ಮೈಸೂರು ವಿಭಾಗೀಯ ಸಂಯೋಜಕ ಡಾ.ಚಂದ್ರಗುಪ್ತ ಮತ್ತು ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಪದಗ್ರಹಣ ನಡೆಸಿಕೊಡುವರು. ಹಿರಿಯ ಕವಯತ್ರಿ ಡಾ.ಲಕ್ಷ್ಮೀಪ್ರೇಮ್ ಕುಮಾರ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net