ಮೇ 01 ರಿಂದ ಮತ ಚಲಾವಣೆಗೆ ಅವಕಾಶ

30 YERRISWAMY 03..
Published on

ಬಳ್ಳಾರಿ : ಲೋಕಸಭಾ ಚುನಾವಣೆ ಹಿನ್ನಲೆ ಮತದಾನ ದಿನದಂದು ಗೈರು ಹಾಜರಿ ಹಾಗೂ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಮೇ 01 ರಿಂದ 03 ರವರೆಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾತಿಳಿಸಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಪೋಸ್ಟಲ್ ವೋಟಿಂಗ್ ಸೆಂಟರ್ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಕೆಪಿಸಿಎಲ್ ಸಂಸ್ಥೆಯ 65 ನೌಕರರು, ಆರೋಗ್ಯ ಇಲಾಖೆ-40, ವಿಮ್ಸ್-08, ಜಿಲ್ಲಾ ಆಸ್ಪತ್ರೆ-41, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ-423, ಅಗ್ನಿಶಾಮಕ ದಳ-67, ಮಾಧ್ಯಮದವರು-07, ಟ್ರಾಫಿಕ್ ಪೊಲೀಸ್-74, ಆರೋಗ್ಯ ಇಲಾಖೆ ಗುರುತಿಸಿರುವ ಆಂಬುಲೆನ್ಸ್ ಸಿಬ್ಬಂದಿ-25, ಕಾರಾಗೃಹ ಇಲಾಖೆ-82, ಕಂಟ್ರೋಲ್ ರೂಂ ನಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ-30 ಸೇರಿದಂತೆ ಒಟ್ಟು 862 ಮತದಾರರಿಗೆ ಈಗಾಗಲೆ 12-ಡಿ ನಮೂನೆ ವಿತರಿಸಿ, ಭರ್ತಿ ಮಾಡಿದ ನಮೂನೆಯನ್ನು ಈಗಾಗಲೆ ಸ್ವೀಕರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net