

ಚಿಕ್ಕಮಗಳೂರು: ರೈತರಿಗೆ ಗುಣಮಟ್ಟದ ವಿದ್ಯುತ್‌ಚ್ಛಕ್ತಿ ಪೂರೈಸದಿರುವ ಹಾಗೂ ಮೀಟರ್ ದರ ಏರಿಸಿರುವ ಮೆಸ್ಕಾಂ ಆಡಳಿತದ ವಿರುದ್ಧ ಗುರುವಾರ ಜಿಲ್ಲಾ ರೈತ ಸಂಘದ ಮುಖಂಡರು ನಗರದ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ಮುಖಂಡರು, ತಾಲೂಕಿನ ರೈತರಿಗೆ ಹಿರೇಮಗಳೂರು ಹಾಗೂ ನಗರ ಮೆಸ್ಕಾಂನ ಎರಡು ಎಂಎಸ್‌ಎಸ್ ಮಾತ್ರವಿದೆ. ಇದರಿಂದ ಹೆಚ್ಚು ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗದೇ ರೈತರು ಕಂಗಾಲಾಗಿದ್ದಾರೆ ಎಂದು ತಿಳಿಸಿದರು.
ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬಗಳು ರಸ್ತೆಗೆ ವಾಲಿ ಕೊಂಡಿರುವ ಪರಿಣಾಮ ಬೀಳುವ ಸ್ಥಿತಿಯಿದ್ದು ವಾಹನ ಸವಾರರಿಗೆ ತೀವ್ರ ಆತಂಕವಾಗಿದೆ. ಜೊತೆಗೆ ಹೆಚ್ಚಿನ ರೈತರಿಗೆ ಮೆಸ್ಕಾಂ ಇಲಾಖೆ ಅವಶ್ಯಕತೆಗೆ ಅನುಗುಣವಾಗಿ ವಿದ್ಯುತ್‌ಚ್ಛಕ್ತಿ ನೀಡುತ್ತಿಲ್ಲ ಎಂದು ಹೇಳಿದರು.
ರೈತರಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಮುನ್ನ ಗುಣಮಟ್ಟದ ವಿದ್ಯುತ್ ಕೊಡಬೇಕು. ಜೊತೆಗೆ ಮೀಟರ್‌ಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸದಂತೆ ಗಮನಹರಿಸಬೇಕು. ಕೆಲವೆಡೆ ವಿದ್ಯುತ್ ಅವಘಡದಿಂದ ಮನೆಯ ವಸ್ತುಗಳು ಸುಟ್ಟಿದ್ದು ಈ ಬಗ್ಗೆ ಮೆಸ್ಕಾಂ ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಹಲವಾರು ವರ್ಷಗಳ ಕಾಲದ ವಿದ್ಯುತ್ ಸಂಪರ್ಕಗಳಿಗೆ ಹೊಸದಾಗಿ ಕಂಬ, ವೈರ್‌ಗಳನ್ನು ಅಳವಡಿ ಸುವ ಬದಲು, ಹಿಂದಿನ ವಿದ್ಯುತ್ ಸಂಪರ್ಕಕ್ಕೆ ಮೆಸ್ಕಾಂ ತೆರಿಗೆ ವಸೂಲಾತಿಯಲ್ಲಿ ತೊಡಗಿದೆ. ಅಲ್ಲ ದೇ ಪ್ರತಿನಿತ್ಯವು ಕನಿಷ್ಟ ೭ ಗಂಟೆಗಳ ಕಾಲ ಹಗಲಿನಲ್ಲಿ ವಿದ್ಯುತ್ ಪೂರೈಸದೇ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ಇತ್ತೀಚೆಗೆ ಮೆಸ್ಕಾಂ ಇಲಾಖೆ ರೈತರು ಮತ್ತು ಸಾರ್ವಜನಿಕರ ಕೊಂದುಕೊರತೆ ಆಲಿಸಲು ಜನಸಂಪರ್ಕ ಸಭೆ ಆಹ್ವಾನಿಸಿದ್ದು, ಸಭೆಯಲ್ಲಿ ಜನಗಳೇ ಇಲ್ಲದಂತಾಗಿದೆ. ಅಲ್ಲದೇ ಬೆಳಗ್ಗೆ ೧೧ ಗಂಟೆಗೆ ಸಭೆಯೇ ಪೂರ್ಣಗೊಂಡಿದೆ. ಮೆಸ್ಕಾಂ ಇಲಾಖೆ ಈ ರೀತಿಯ ಸಭೆ ಕರೆದು ಕಾಟಾಚಾರದ ಸಭೆಗಳಾಗಿಸಿ ರೈತರಿಗೆ ದ್ರೋಹ ಮಾಡುತ್ತಿವೆ ಎಂದರು.
ರೈತರ ಪಂಪ್‌ಸೆಟ್‌ಗಳಿಗೆ ಮತ್ತು ಸಿಂಗಲ್ ಪೇಸ್ ಇರುವವರಿಗೆ ವಿದ್ಯುತ್‌ಚ್ಚಕ್ತಿ ಶುಲ್ಕ ಏರಿಸಿದೆ. ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಲು ಹೊರಟಿದೆ. ವಿದ್ಯುತ್ ದರ ೮೦೦ ಹಾಗು ಎಸ್ಪಿ ದರ ೯೦೦೦ ವರೆಗೆ ಏರಿಸಲಾ ಗಿದೆ. ಪ್ರಿಪೇಡ್ ಮೀಟರ್ ಕಡ್ಡಾಯಮಾಡಿ ರೈತರ ಮೇಲೆ ಮರಣ ಶಾಸನ ಬರೆಯಲು ರಾಜ್ಯಸರ್ಕಾರ ಹೊರಟಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಎಂ.ಬಿ.ಚAದ್ರಶೇಖರ್, ಕೆ.ಕೆ.ಕೃಷ್ಣೇಗೌಡ, ಕೆ.ಬಿ. ಲೋಕೇಶ್, ಎಚ್.ಡಿ.ಉಮೇಶ್ ಮತ್ತಿತರರಿದ್ದರು.