ಮೆರಿಟ್ ಪದ್ಧತಿ ಬೇಡ, ಸೇವಾ ಹಿರಿತನ ಪರಿಗಣಿಸಿ

IMG-20230824-WA0005
Published on

ಚಿಂಚೋಳಿ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘವು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ತಾಲೂಕು ಅಧ್ಯಕ್ಷ ಬಸವರಾಜ ಸೈದಾಪೂರ ಮಾತನಾಡಿ, ಕೂಡಲೇ ಪ್ರತಿವರ್ಷ ನೇಮಕಾತಿ ಪ್ರಕ್ರಿಯೆಯಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ ಕೊಳ್ಳುವಾಗ ಸೇವಾ ಹಿರಿತನವನ್ನು ಪರಿಗಣಿಸಿ ಮೊದಲ ಆದ್ಯತೆ ಕೊಡುವುದು ಮತ್ತು ಮೆರಿಟ್ ಪದ್ಧತಿ ತೆಗೆದು ಹಾಕಬೇಕು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅತಿಥಿ ಶಿಕ್ಷಕರ/ಶಿಕ್ಷಕಿಯರ ಸೇವಾ ಭದ್ರತೆ ನೀಡಬೇಕು. ಅತಿಥಿ ಶಿಕ್ಷಕ ಎಂಬ ಪದವನ್ನು ತೆಗೆದುಹಾಕಿ ಗೌರವ ಶಿಕ್ಷಕ ಎಂದು ನಮೂದಿಸಬೇಕು ಎಂಬ ಮುಂತಾದ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.

ಈ ಹೋರಾಟದಲ್ಲಿ ಜಗನ್ನಾಥ ದೊಡ್ಡಮನಿ, ಜಗದೇವ ಗೌತಮ್, ನಂದಕುಮಾರ್ ಪಾಟೀಲ್, ರಾಹುಲ್ ತಾಜಲಾಪೂರ, ರಾಜೇಂದ್ರ ಹೊಸಮನಿ, ಮಲ್ಲೇಶ್ ಕುಂಚಾವರಂ, ಸಂಜು ಕುಮಾರ್, ರೇವಣಸಿದ್ದ ಪೂಜಾರಿ, ಶಂಭುಲಿಂಗ, ರೇಣುಕಾ, ಸುರೇಖಾ, ವಿಷ್ಣುವರ್ಧನ್ ರೆಡ್ಡಿ, ವಿಜಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net