ಮೆರವಣಿಗೆ ವೇಳೆ ಡಿಜಿ ಬಳಸಬಾರದು

11
Published on


ಮೂಡಲಗಿ:
ಪಟ್ಟಣದ ಪೊಲೀಸ್​ ಠಾಣೆಯಲ್ಲಿ ಗಣೇಶ ಹಬ್ಬ ಹಾಗೂ ಈದ್​ ಮಿಲಾದ್​ ಪ್ರಯುಕ್ತ ಈಚೆಗೆ ಶಾಂತಿಸಭೆ ಜರುಗಿತು.
ಸಿಪಿಐ ಶ್ರೀಶೆಲ ಬ್ಯಾಕೂಡ ಮಾತನಾಡಿ, ಗಣೇಶೋತ್ಸವ ಮತ್ತು ಈದ್​ ಮಿಲಾದ್​ ವೇಳೆ ನಿಯಮ ಮೀರಿ ಯಾರೇ ನಡೆದುಕೊಂಡರೂ ಕಾನೂನು ಕ್ರಮ ಜರುಗಿಸಲಾಗುವುದು. ಮೆರವಣಿಗೆ ವೇಳೆ ಡಿಜಿ ಬಳಸಬಾರದು. ಶಾಂತಿ ಹಾಗೂ ಸೌಹಾರ್ದದಿಂದ ಹಬ್ಬ ನಡೆಸಬೇಕು. ಶಾಂತಿಗೆ ಭಂಗ ತರಬಾರದು ಎಂದರು. ಹಬ್ಬಕ್ಕೆ ಎಲ್ಲ ಗಣೇಶ ಮಂಡಳಿಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ. ಆಯಾ ಪ್ರದೇಶದ ಜನಪ್ರತಿನಿಧಿಗಳು, ಹಿರಿಯರು ಜವಾಬ್ದಾರಿ ವಹಿಸಿಕೊಳ್ಳಬೇಕೆಂದರು. ಪಿಎಸ್​ಐ ರಾಜು ಪೂಜೇರಿ, ಪೊಲೀಸ್​ ಸಿಬ್ಬಂದಿ ಎನ್​.ಎಸ್​. ಒಡೆಯರ್​, ಲಕ್ಷ$್ಮಣ ಗೋಡೆರ್​ ಹಾಗೂ ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net