ಮೆರವಣಿಗೆ ವೇಳೆ ಕುಸಿದುಬಿದ್ದ ಸಿಪಿಐ

CPI Raja shekar.
ರಾಜಶೇಖರ್ ವೃತ್ತನಿರೀಕ್ಷಕ
Published on

ಸೊರಬ: ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಬಡಾವಣೆಯ ಶ್ರೀ ಮಾಂತಂಗೇಶ್ವರಿ ಹಾಗೂ ಶ್ರೀ ನಾಗಚೌಡೇಶ್ವರಿ ಯುವಕ ಸಂಘದಿಂದ ಪ್ರತಿಷ್ಠಾಪಿತ ನಾಟ್ಯ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಗುರುವಾರ ಸಂಜೆ ನಡೆಯುತ್ತಿದ್ದಾಗ ಕರ್ತವ್ಯನಿರತ ವೃತ್ತ ನಿರೀಕ್ಷಕ ಎಲ್.ಜಿ.ರಾಜಶೇಖರ್ ಕುಸಿದು ಬಿದ್ದಿದ್ದಾರೆ. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು ರಾಜಶೇಖರ ಅವರನ್ನು ತಕ್ಷಣ ಸೊರಬ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದರು. ವಿಷಯ ತಿಳಿದ ಹಿರಿಯ ಅಕಾರಿಗಳು ಪರಿಶೀಲನೆ ನಡೆಸಿದಾಗ ಸಿಪಿಐ ರಾಜಶೇಖರ ಕುಸಿದು ಬೀಳಲು ಶಬ್ಧ ಹೆಚ್ಚಳ ಕಾರಣ ಎನ್ನಲಾಗಿದೆ. ನಿಯಮ ಉಲ್ಲಂಸಿ ಧ್ವನಿವರ್ಧಕ ಬಳಸಿದ್ದಾರೆ ಎಂದು ಎಸ್‌ಪಿ ನಿರ್ದೇಶನದಂತೆ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಿದರು. ರಾಜಶೇಖರ ಅವರು ಚೇತರಿಸಿಕೊಂಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net