ಮೆರವಣಿಗೆ ಮಾರ್ಗ ಪರಿಶೀಲಿಸಿದ ಡಿಐಜಿ

02 KAMPLI 03
Published on

ಕಂಪ್ಲಿ: ಬಳ್ಳಾರಿ ಡಿಐಜಿ ವರ್ತಿಕಾ ಕಟಿಯಾರ್ ಮಂಗಳವಾರ ಪಟ್ಟಣಕ್ಕೆ ಭೇಟಿ ನೀಡಿದ್ದರು. ಗಂಗಾನಗರದ ಹಳೆಯ ಸಿಂಡಿಕೇಟ್ ಬ್ಯಾಂಕ್ ಹತ್ತಿರ ಹಿಂದು ಮಹಾಮಂಡಳಿಯಿಂದ ಪ್ರತಿಷ್ಠಾಪಿಸಿದ ಗಣಪತಿ ಹಾಗೂ ತುಂಗಭದ್ರಾ ನದಿ ಸೇತುವೆ ಬಳಿ ಗಣಪತಿ ವಿಸರ್ಜನಾ ಸ್ಥಳವನ್ನು ವೀಕ್ಷಿಸಿದರು.

ಈದ್ ಮಿಲಾದ್ ಮೆರವಣಿಗೆ ಮತ್ತು ಗಣಪತಿ ಮೂರ್ತಿ ವಿಸರ್ಜನಾ ಮಾರ್ಗ ಹಾಗೂ ನದಿ ಬಳಿ ಗಣಪತಿ ವಿಸರ್ಜನಾ ಸ್ಥಳವನ್ನು ವೀಕ್ಷಿಸಿದ್ದೇನೆ. ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಬಂದೋಬಸ್ತ್ ಪರಿಶೀಲಿಸಿದ್ದೇನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net