ಮೆರವಣಿಗೆ ಇಲ್ಲದೆ ಗಣೇಶ ವಿಸರ್ಜನೆ

0109Klb05
Published on

ಕಲಬುರಗಿ: ನಗರ ಸೇರಿ ಜಿಲ್ಲೆಯ ವಿವಿಧೆಡೆ 11ನೇ ದಿನವಾದ ಮಂಗಳವಾರ ಅನಂತ ಚತುರ್ಥಿಯಂದು ಗಣೇಶ ಮೂರ್ತಿಗಳ ವಿಸರ್ಜನೆ ಸರಳವಾಗಿ ಜರುಗಿತು. ಮೆರವಣಿಗೆ ಅಬ್ಬರವಿಲ್ಲದೆ ಸರಳ ರೀತಿಯಲ್ಲಿ ಶ್ರೀಶರಣಬಸವೇಶ್ವರ ಕೆರೆಯಲ್ಲಿ ಗಣೇಶ ವಿಗ್ರಹ ವಿಸಜರ್ಿಸಿ ಭಕ್ತರು ಸಂಭ್ರಮಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರದ ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳ ಕೆರೆಗೆ ಆಗಮಿಸಿದ ಒಂದೊಂದು ಮೂರ್ತಿಗಳು ವಿಸರ್ಜಿಸಲಾಯಿತು. ಪಾಲಿಕೆ ಸಿಬ್ಬಂದಿ ವಿಗ್ರಹ ವಿಸರ್ಜನೆ ಕಾರ್ಯ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net