ಬಳ್ಳಾರಿ : ಕೊಲೆ ಆರೋಪಿ ನಟ ದರ್ಶನ್‌ಗೆ ಬೆನ್ನಿನಲ್ಲಿ ಊತ ಕಾಣಿಸಿಕೊಂಡ ಹಿನ್ನಲೆ, ವೈದ್ಯರು ತಪಾಸಣೆ ನಡೆಸಿದ್ದು, ವರದಿ ಬಂದ ಬಳಿಕ ಸರ್ಜರಿ ಮಾಡುವುದರ ಬಗ್ಗೆ ನಿರ್ಧಾರಿಸಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದರು.
ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ತಿಂಗಳಕ್ಕಿಂತಲೂ ಅಧಿಕ ದಿನಗಳು ಕಳೆದಿವೆ. ಜೈಲಿಗೆ ಸ್ಥಳಾಂತರಗೊಂಡ ದಿನದಿಂದ ಬೆನ್ನು ನೋವಿನ ಸಮಸ್ಯೆಯಿದ್ದು, ಸರ್ಜಿಕಲ್ ಚೇರ್ ನೀಡುವಂತೆ ಮನವಿ ಮಾಡಿದ್ದರು. ಬಳಿಕ ವೈದ್ಯರ ಸಲಹೆ ಮೇರೆಗೆ ಚೇರ್ ನೀಡಲಾಯಿತು. ಸದ್ಯ ದರ್ಶನ್‌ಗೆ ಬೆನ್ನಿನ ಊತದ ಬಗ್ಗೆ ಬಿಮ್ಸ್ ವೈದ್ಯರು ತಪಾಸಣೆ ನಡೆಸಿದ್ದು, ಇನ್ನೂ ವರದಿ ಬಂದಿಲ್ಲ. ಬಂದ ಬಳಿಕ ಜೈಲಿನ ನಿಯಮದಂತೆ ಅವರು ಒಪ್ಪಿದರೆ ಶಸ್ತ್ರಚಿಕಿತ್ಸೆ ಗೆ ಒಳಪಡಿಸಲಾಗುವುದು. ಸದ್ಯ ಅವರಿಗೆ ನೋವು ನಿವಾರಕ ಔಷಧಗಳನ್ನು ನೀಡಲಾಗಿದೆ. ಶುಕ್ರವಾರ ಜೈಲಿನ ಎಲ್ಲ ಕೈದಿಗಳಿಗೆ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಗಿದೆ. ತಪಾಸಣೆಯಲ್ಲಿ ದರ್ಶನ್ ಅವರನ್ನು ವೈದ್ಯರು ಪರಿಶೀಲಿಸಿದ್ದು ಆರೋಗ್ಯವಾಗಿದ್ದು ಯಾವುದೆ ಸಮಸ್ಯೆಯಿಲ್ಲ ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದರು.