

ಬೆಟ್ಟದಪುರ: ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಸಮೀಪದ ನಂದಿಪುರ ಗ್ರಾಮದಲ್ಲಿ ಸೋಮವಾರ ಮೆಟ್ಲಿಂಗ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಯೋಜನೆಯಡಿ ಸುಮಾರು 30ಕಿ.ಮೀ ಹಾಗೂ ನಬಾರ್ಡ್‌ನಿಂದ 25 ಕೀ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಒಂದು ಕಿ.ಮೀ.ಗೆ ನಾಲ್ಕು ಲಕ್ಷ ರೂ.ಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲಾಗಿದ್ದು, ಇದರ ಜತೆ ನರೇಗಾ ಯೋಜನೆಯಡಿ 8.5 ಲಕ್ಷ ರೂ.ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿರುವ 30 ಕಿ.ಮೀ. ರಸ್ತೆಗೆ ಹಣ ಮಂಜೂರಾಗಿದೆ. ಮುಂದಿನ ದಿನದಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಎಇಇ ಮಲ್ಲಿಕಾರ್ಜುನ್, ವಿಶ್ವಕರ್ಮ ಸಂಘದ ತಾಲೂಕು ನಿರ್ದೇಶಕ ಎನ್.ಎಚ್.ವಿಶ್ವನಾಥ್, ಮುಖಂಡರಾದ ಸ್ವಾಮಿನಂದಿಪುರ, ನಾಗೇಂದ್ರ, ಚಿಕ್ಕೇಗೌಡ, ಬಸವರಾಜ್, ರೇವಣ್ಣ, ಆನಂದ್, ಅಭಿಲಾಷ, ದೊಡ್ಡೇಗೌಡ, ಅಯ್ಯಪ್ಪ, ಜಯಣ್ಣ, ಮಹಾದೇವ್, ಜ್ಯೋತಿಸ್ವಾಮಿ ಇದ್ದರು.