ಮೆಟ್ಟಿಲುಗಳಿಗೆ ಕನ್ನಡ ಭಾವುಟ ಬಣ್ಣ ಬಳಕೆ : ಮೈಸೂರಿನಲ್ಲಿ ಪ್ರತಿಭಟನೆ

Use of Kannada color for stairs Protest in Mysore
Published on

ಮೈಸೂರು: ನಗರದ ಹೈವೇ ವೃತ್ತದ ಬಳಿ ಇರುವ ಹೋಟೆಲ್ವೊಂದಕ್ಕೆ ತೆರಳುವ ಮೆಟ್ಟಿಲುಗಳಿಗೆ ಕನ್ನಡದ ಭಾವುಟದ ಬಣ್ಣವಾದ ಹಳದಿ, ಕೆಂಪು ಬಣ್ಣ ಬಳಿದಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಹೋಟೆಲ್‌ಗೆ ಬರುವ ಪ್ರತಿಯೊಬ್ಬರು ಹಳದಿ, ಕೆಂಪು ಬಣ್ಣವನ್ನು ತುಳಿಯುತ್ತಾರೆ. ಇದು ಕನ್ನಡ ಭಾವುಟಕ್ಕೆ ಮಾಡಿದ ಅವಮಾನವಾ ಗಿದ್ದು, ಕೂಡಲೇ ಹಳದಿ, ಕೆಂಪು ಬಣ್ಣವನ್ನು ಅಳಿಸಿ ಬೇರೆ ಬಣ್ಣ ಬಳಿಯಬೇಕು ಎಂದು ಒತ್ತಾಯಿಸಿದ ಮೇರೆಗೆ ಹೋಟೆಲ್ ಮಾಲೀಕರ ಕ್ಷಮಾಪಣೆ ಕೋರಿ ಬಣ್ಣವನ್ನು ಬದಲಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಆಟೋ ಮಹದೇವ್, ಕುಮಾರ್ ಬಸಪ್ಪ, ಹನುಮಂತಯ್ಯ, ನೇಹಾ, ಮಂಜುಳ, ಕೃಷ್ಣಪ್ಪ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net