ಮೆಟ್ಟಿಲಿನಿಂದ ಕಾಲುಜಾರಿ ಯುವತಿ ಸಾವು

ಮೆಟ್ಟಿಲಿನಿಂದ ಕಾಲುಜಾರಿ ಯುವತಿ ಸಾವು
Published on


ಚನ್ನರಾಯಪಟ್ಟಣ: ಆಯುಧ ಪೂಜೆಯಂದು ಮೊದಲ ಹಂತಸ್ತಿನಲ್ಲಿರುವ ಮನೆಗೆ ತೆರಳಲೆಂದು ಮೆಟ್ಟಿಲು ಹತ್ತುತಿದ್ದ ವೇಳೆ ಕಾಲು ಜಾರಿ ಬಿದ್ದ ಯುವತಿ ತೀರ್ವ ಗಾಯಗೊಂಡು ಮಂಗಳವಾರ ಮೃತಪಟ್ಟಿದ್ದಾಳೆ.


ಪಟ್ಟಣದ ಚನ್ನಿಗರಾಯ ಬಡಾವಣೆಯ ನಿವಾಸಿ ಕಲಾವಿದ ನಂಜುಂಡ ಮೈಮ್ ಎಂಬವರ ಮಗಳು ಸಿ.ಎನ್.ಚಂದನ(18) ಮೃತ ದುರ್ದೈವಿ.


ಸಿ.ಎನ್.ಚಂದನ ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಅ.4 ಮಂಗಳವಾರ ಮಧ್ಯಾಹ್ನ ಸುಮಾರಿನಲ್ಲಿ ಮೆಟ್ಟಿಲೇರುತ್ತಿದ್ದ ವೇಳೆ ಅನಿವಾರ್ಯ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ.


ಈ ವೇಳೆ ಸಂಪ್‌ಗೆ ಅಳವಡಿಸಿರುವ ಕಬ್ಬಿಣದ ಡೋರ್‌ಗೆ ತಲೆ ಬಡಿದು ತೀರ್ವ ಗಾಯಗೊಂಡಿದ್ದು ಕೊನೆಯುಸಿರೆಳೆದಿದ್ದಾಳೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net