ಮೆಟಗುಡ್ಡ ಮನೆತನದ ಮೇಲೆ ಜನರ ಆಶೀರ್ವಾದವಿರಲಿ

1
ಬೈಲಹೊಂಗಲ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಉದ್ಯಮಿ ವಿಜಯ ಮೆಟಗುಡ್ಡ ಮಾತನಾಡಿದರು. ಪ್ರೊ.ಸಿ.ವಿ. ಜ್ಯೋತಿ, ಎಸ್​.ಎ್​. ಹರಕುಣಿ, ಬಿ.ಬಿ.ನರಸನ್ನವರ, ಗುರು ಮೆಟಗುಡ್ಡ, ಸುಭಾಷ ತುರಮರಿ ಇತರರು ಇದ್ದರು.
Published on

ಬೈಲಹೊಂಗಲ: ಮೆಟಗುಡ್ಡ ಮನೆತನ ಸಮಾಜಮುಖಿ ಕಾರ್ಯಗಳಿಂದ ಈ ಭಾಗದ ಜನತೆಯ ಪ್ರೀತಿ, ವಿಶ್ವಾಸ ಗಳಿಸಿ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ನಮ್​ಜನಾಶೀರ್ವಾದ ಸದಾ ಹೀಗೆ ಇರಲಿ ಎಂದು ಉದ್ಯಮಿ ವಿಜಯ ಮೆಟಗುಡ್ಡ ಹೇಳಿದರು.

ಪಟ್ಟಣದಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರು ಜು.21ರಂದು ಆಚರಿಸಿಕೊಳ್ಳಲಿರುವ ಜನ್ಮದಿನದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ
ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ಕ್ಷೇತ್ರದ ಪ್ರಥಮ ಶಾಸಕ ಎಚ್​.ಎಸ್​. ಮೆಟಗುಡ್ಡ ನಿರ್ಮಿಸಿದ ಪಟ್ಟಣದ ಸಿಮೆಂಟ್​ ರಸ್ತೆಗಳು 50 ವರ್ಷ ಕಳೆದರೂ ಚೆನ್ನಾಗಿವೆ. ಅಂದಿನ ಪುರಸಭೆ ಅಧ್ಯ ಬಿ.ಡಿ.ಮೆಟಗುಡ್ಡ ಅವರು ಮಲಪ್ರಭಾ ನದಿಯಿಂದ ಬೈಲಹೊಂಗಲ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ತಂದರು. ಬೈಲಹೊಂಗಲ ೇತ್ರದಲ್ಲಿ ಸಾವಿರಾರು ಕೋಟಿ ರೂ. ಯೋಜನೆಗಳನ್ನು ತಂದ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅಭಿವದ್ಧಿಯ ಹೊಳೆ ಹರಿಸಿದ್ದಾರೆ ಎಂದರು.

ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಅಂದು ಬೆಳಗ್ಗೆ 9ಗಂಟೆಗೆ ರಕ್ತದಾನ ಶಿಬಿರ ಜರುಗಲಿದೆ. ಗುರುವಂದನೆ ಕಾರ್ಯಕ್ರಮ,
ರೋಗಿಗಳಿಗೆ ಹಣ್ಣು ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಆಯೋಜನೆಗೆ ನಿರ್ಧರಿಸಲಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಶಿಬಿರದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಕಾರ್ಯಕರ್ತರು ಪವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಶ್ರಮಿಸಬೇಕು. ಮುಂಬರುವ ದಿನದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರೋಣ ಎಂದರು. ಎಪಿಎಂಸಿ ಮಾಜಿ ಸದಸ್ಯ ಎಸ್​.ಎ್​.ಹರಕುಣಿ, ನಿವೃತ್ತ ಶಿಕರಾದ ಬಿ.ಬಿ. ನರಸನ್ನವರ, ಎಂ.ಎ. ನಾಯ್ಕ, ಹಿರಿಯರಾದ ವಿ.ಜಿ.ಪಾಟೀಲ, ನಾಗಪ್ಪ ಮೇಟಿ, ವಕೀಲ ರವಿ ಮೆಟಗುಡ್ಡ, ಬಸಣ್ಣ ಸಾಲಿಮಠ, ಪ್ರೊ.ಸಿ.ವಿ. ಜ್ಯೋತಿ, ಸುನೀಲ ಮರಕುಂಬಿ, ಬಿಜೆಪಿ ಮಂಡಲ ಅಧ್ಯ ಗುರುಪಾದ ಕಳ್ಳಿ, ಉಪಾಧ್ಯ ಸುಭಾಷ ತುರಮರಿ, ಲಕ್ಕಪ್ಪ ಕಾರಗಿ, ಬಿಜೆಪಿ ಜಿಲ್ಲಾ ಉಪಾಧ್ಯ ಗುರು ಮೆಟಗುಡ್ಡ, ಸಚಿನ ಕಡಿ, ಶ್ರೀಶೆಲ ಮೆಟಗುಡ್ಡ, ಶಂಭು ಹೂಲಿ, ಪ್ರುಲ ಪಾಟೀಲ, ಸುರೇಶ ವಾರಿ, ದಯಾನಂದ ಪರಾಳಶೆಟ್ಟರ, ಆನಂದ ತುರಮರಿ, ಸಂತೋಷ ಹಡಪದ, ಮಲ್ಲಿಕಾರ್ಜುನ ಗೀರನವರ, ಮಲ್ಲಿಕಾರ್ಜುನ ಕಮತಗಿ, ಉಮೇಶ ಬೋಳಣ್ಣವರ, ಅಜ್ಜಪ್ಪ ಹೊಸೂರ, ನಾಮದೇವ ಶಿಂಗನ್ನವರ, ಮಂಜು ಜೋರಾಪುರ, ಬಸವರಾಜ ನಂಜಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net