ಮೆಚ್ಚುಗೆಗೆ ಪಾತ್ರವಾದ ಜನಪ್ರತಿನಿಧಿ ನಡೆ

ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಿರುವುದನ್ನು ಸ್ಥಳೀಯರು ಗುಹ್ಯ 2ನೇ ವಾರ್ಡ್ ಸದಸ್ಯ ಹಸ್ಸನ್ ಅವರ ನೇತೃತ್ವದಲ್ಲಿ ಪ್ರದರ್ಶಿಸುತ್ತಿರುವುದು.
IMG-20230713-WA0077
Published on

ಸಿದ್ದಾಪುರ: ಸಿದ್ದಾಪುರ ಗ್ರಾಮ ಪಂಚಾಯಿತಿಯ ಗುಹ್ಯ 2ನೇ ವಾರ್ಡ್ ಸದಸ್ಯ ಹಸ್ಸನ್ 137 ಕುಟುಂಬಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಗೃಹಜ್ಯೋತಿ ಯೋಜನೆಗೆ ಸಹಾಯ ಮಾಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದಸ್ಯನ ಸಕಾಲದ ಸ್ಪಂದನೆಯಿಂದಾಗಿ ಕೆಲಸಕ್ಕೆ ರಜೆ ಮಾಡಿ ನಾಗರಿಕ ಸೇವಾಕೇಂದ್ರಕ್ಕೆ ಅಲೆದಾಡುವುದು ತಪ್ಪಿದಂತಾಗಿದೆ. ಅಲ್ಲದೆ ಸೇವಾಕೇಂದ್ರಗಳಿಗೆ ಖರ್ಚು ಮಾಡಬೇಕಾದ ಹಣವನ್ನು ತಾವೇ ಭರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net