

ರಾಯಬಾಗ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೇವಕನಾಗಿ ಸೇವೆ ಸಲ್ಲಿಸುತ್ತ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದಲ್ಲಿ ಶನಿವಾರ ಮೋದಿ ಸರ್ಕಾರಕ್ಕೆ ೧೧ ವರ್ಷ ತುಂಬಿದ ಅಂಗವಾಗಿ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಬಿಜೆಪಿಯಿಂದ ವಿಕಸಿತ ಭಾರತದ ಪರಿಕಲ್ಪನೆಯುಳ್ಳ ಕಾರ್ಯಕ್ರಮಗಳನ್ನು ನಗರ, ಪಟ್ಟಣಗಳಲ್ಲಿ ಸಭೆ ಆಯೋಜನೆ, ಆಯುಷ್ಮಾನ್ ಭಾರತ ಯೋಜನೆಯಡಿ ೭೦ ವರ್ಷ ಮೇಲ್ಪಟ್ಟ ಹಿರಿಯರ ನೋಂದಣಿ ಖಚಿತಪಡಿಸುವುದು, ಜೂ. ೨೧ರಂದು ಅಂತಾರಾಷ್ಟ್ರೀಯ ಯೋಗ ದಿನ, ವಿಶ್ವ ಪರಿಸರ ದಿನ ಅಂಗವಾಗಿ ಆ. ೧೫ರ ವರೆಗೆ ದೇಶಾದ್ಯಂತ ಸಸಿ ನೆಡುವ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಶಾಂಭವಿ ಅಶ್ವತ್ಥಪುರ ಮಾತನಾಡಿ, ದೇಶದ ೮೧ ಕೋಟಿ ಜನರಿಗೆ ಉಚಿತ ಪಡಿತರ, ಜಲಜೀವನ್ ಮಿಷನ್ ಯೋಜನೆಯಡಿ ೧೫ ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರು, ೧೨ ಕೋಟಿ ಬಯಲುಮುಕ್ತ ಶೌಚಗೃಹ, ಬೀದಿಬದಿ ವ್ಯಾಪಾರಸ್ಥರಿಗೆ ೬೮ ಕೋಟಿ ರೂ. ಸಾಲ ವಿತರಣೆ, ಉಜ್ವಲ ಗ್ಯಾಸ್ ವಿತರಣೆ, ೭೭ ಕೋಟಿ ಆಯುಷ್ಮಾನ್ ಭೀಮಾ ಆರೋಗ್ಯ ಯೋಜನೆಗಳು ಕೇಂದ್ರ ಸರ್ಕಾರದ ಕೊಡುಗೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಮಹೇಶ ಭಾತೆ, ಸದಾನಂದ ಹಳಿಂಗಳಿ, ದುಂಡಪ್ಪ ಬೆಂಡವಾಡೆ, ರಾಜಶೇಖರ ಖನದಾಳೆ, ಬಸವರಾಜ ದೋಣವಾಡೆ, ರಾಜು ಹರಗನ್ನವರ, ಅಣ್ಣಾಸಾಹೇಬ ಖೆಮಲಾಪುರೆ, ಸದಾಶಿವ ಘೋರ್ಪಡೆ, ಅಪ್ಪಾಸಾಹೇಬ ಬ್ಯಾಕುಡೆ, ಸಂಜು ಮೈಶಾಳೆ, ಮಹೇಶ ಕರಮಡಿ, ಸುಭಾಷ ಕೋರೆ, ಭಾರತಿ ಲೋಹಾರ ಇತರರಿದ್ದರು.