ಮೆಗಾ ಫುಡ್ ಪಾರ್ಕ್‌ಗೆ 450 ಕೋಟಿ ರೂ. ಬಂಡವಾಳ:  ಸಂಸ್ಥೆಯ ಸಿಇಒ ಅಶೋಕ್ ಹೇಳಿಕೆ

ASHIOK- press meet (1)
Published on

ಹಾಸನ: ಜಿಲ್ಲೆಯಲ್ಲಿ ಮೆಗಾ ಫುಡ್ ಪಾರ್ಕ್‌ಗೆ ವಿದೇಶಿ ನೇರ ಬಂಡವಾಳ ಹಣ ಮೊದಲ ಹಂತದಲ್ಲಿ 100 ಕೋಟಿ ರೂ. ಹಾಗೂ ಎರಡನೇ ಹಂತದಲ್ಲಿ 350 ಕೋಟಿ ರೂ. ಸೇರಿ ಒಟ್ಟು 450 ಕೋಟಿ ರೂ. ಹರಿದು ಬರಲಿದೆ ಎಂದು ಸಂಸ್ಥೆಯ ಸಿಇಒ ಅಶೋಕ್ ತಿಳಿಸಿದರು.

ನಮ್ಮ ಸಂಸ್ಥೆಗೆ ಹೂಡಿಕೆ ಬರುವುದಾಗಿ ನವೆಂಬರ್‌ನಲ್ಲಿ ತಿಳಿಸಿದ್ದೆ. ಆದರೆ ಎಷ್ಟು ಹಣ ಹೂಡಿಕೆ ಆಗುತ್ತಿದೆ ಎಂಬುವುದರ ಬಗ್ಗೆ ತಿಳಿಸಿರಲಿಲ್ಲ. ಕರ್ನಾಟಕ ಸರ್ಕಾರ ನಡೆಸುತ್ತಿರುವ ವಿಶ್ವ ಹೂಡಿಕೆ ಸಮ್ಮೇಳನ 2025ರಲ್ಲಿ ಸಹಿ ಹಾಕುತ್ತಿದ್ದು ಮೊದಲ ಹಂತ 100 ಕೋಟಿ ರೂ. ಹೂಡಿಕೆಗೆ ಮಾತ್ರ. ಈಗಾಗಲೇ ಇದನ್ನೂ ಡಿಸೆಂಬರ್ ಮೊದಲ ವಾರದಲ್ಲಿಯೇ ರಾಜ್ಯ ಸರ್ಕಾರದ ಆಯುಕ್ತರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ, ಖನಿಜ ಭವನ ಮತ್ತು ಇನ್ವೆಸ್ಟ್ ಕರ್ನಾಟಕ ಫೋರಮ್ ಗಮನಕ್ಕೆ ತಂದಿರುತ್ತೇನೆ. ಆದರೆ ಸೂಕ್ತ ರೀತಿಯ ಬೆಂಬಲ ಸಿಕ್ಕಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

2022 ರಲ್ಲಿ ನಡೆದ ಹೂಡಿಕೆ ಸಮ್ಮೇಳನದಲ್ಲಿ ಅಕ್ಟೋಬರ್ ಮೂರನೇ ವಾರ ಆಹ್ವಾನ ಪತ್ರಿಕೆ ಸಿಕ್ಕಿದ ಕಾರಣ ಹೂಡಿಕೆ ಕೈ ತಪ್ಪಿತ್ತು. ಆದರೆ ಈಗ ಹಿಂದೆ ಮಾಡಿದ ತಪ್ಪನ್ನು ಸರಿಪಡಿಸಿಕೊಂಡಿದ್ದೇನೆ. ಆದರೆ ಸರ್ಕಾರದ ಕಡೆಯಿಂದ ಸೂಕ್ತ ಬೆಂಬಲ ದೊರೆಯುತ್ತಿಲ್ಲ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಅಡಿಯಲ್ಲಿ ಬರುವ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು, ನಿಗಮ ನಿಯಮಿತ ಎಂಡಿ, ಕೆ.ಎ.ಪಿ.ಪಿ.ಇ.ಸಿ. ಗಮನಕ್ಕೂ ಇಮೇಲ್ ಮೂಲಕ ತಂದಿದ್ದೇನೆ ಎಂದರು.

ಮುಂದೆ ನಮ್ಮ ಫುಡ್ ಪಾರ್ಕ್‌ಗೆ ಅವಶ್ಯ ಇರುವ ಧಾನ್ಯಗಳನ್ನು ರೈತರೇ ಬೆಳೆದು ಕೊಡಬೇಕು ಮತ್ತು ರೈತರ ಜೊತೆ ಒಪ್ಪಂದ ಕೃಷಿ ಜಾರಿ ಮಾಡಬೇಕಾಗಿರುವ ಕಾರಣ ಆಸಕ್ತ ಪತ್ರಕರ್ತರಿಗೆ ಮತ್ತು ಕೆಲ ರೈತರಿಗೆ ನಾವು ಯಾವ ಯಾವ ದೇಶಗಳಲ್ಲಿ ಮಾರುಕಟ್ಟೆ ಹೊಂದಿದ್ದೇವೆ ಎಂದು ಪರಿಶೀಲಿಸುವ ಸಲುವಾಗಿ ಆಯ್ದ ದೇಶಗಳಿಗೆ ವಿದೇಶ ಪ್ರಯಾಣ ಏರ್ಪಡಿಸಲಾಗಿದೆ. ಎಷ್ಟು ಜನಕ್ಕೆ ಏರ್ಪಡಿಸಬೇಕು ಎಂದು ಮುಂದೆ ನಿರ್ಧರಿಸುತ್ತೇನೆ. ಆಸಕ್ತರು ನಮ್ಮ ಜೊತೆ ಬರಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net