ಮೆಗಾ ಎಂಎಸ್​ಎಂಇ ಔಟ್​ರೀಚ್​ ಅಭಿಯಾನಕ್ಕೆ ಚಾಲನೆ

05 Jaggu 7
ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾ ಬೆಳಗಾವಿ ಪ್ರಾದೇಶಿಕ ಕಚೇರಿಯಲ್ಲಿ ಮೆಗಾ ಎಂಎಸ್​ಎಂಇ ಔಟ್​ರೀಚ್​ ಅಭಿಯಾನ ಉದ್ಘಾಟಿಸಲಾಯಿತು. ಮಹೇಂದ್ರ ರೆಡ್ಡಿ, ಮನೀಶ ಮೇಣ್ಣವರ, ಾನೇಶ್​ಕುಮಾರ್​, ಆಶಿಶ್​ ಕುಬೆ, ಆಂಥೋನಿ ಸೆರಾವ್​ ಇತರರಿದ್ದರು.
Published on

ಬೆಳಗಾವಿ: ಭಾರತ ಸರ್ಕಾರದ ವಿಕಸಿತ ಭಾರತ ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾ ದೇಶಾದ್ಯಂತ ವಾರಪೂರ್ತಿ ಆರಂಭಿಸಿರುವ ಮೆಗಾ ಎಂಎಸ್​ಎಂಇ ಔಟ್​ರೀಚ್​ ಪ್ರಚಾರ ಅಭಿಯಾನಕ್ಕೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್​, ಬೆಳಗಾವಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯ ಸಂಜೀವ ಕಟ್ಟಿಶೆಟ್ಟಿ, ಮುಂಬೈ ಕೇಂದ್ರ ಕಚೇರಿಯ ಯುಬಿಐನ ಜನರಲ್​ ಮ್ಯಾನೇಜರ್​ ಮಹೇಂದ್ರ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು.

ಅಭಿಯಾನದಲ್ಲಿ ಯೂನಿಯನ್​ ಬ್ಯಾಂಕ್​ನ ಉದ್ಯಮಿ ಸ್ನೇಹಿ ಎಂಎಸ್​ಎಂಇ ಸೇವೆಗಳಾದ ಎಂಎಸ್​ಎಂಇ ಸೂಪರ್​ಫಾಸ್ಟ್​, ಯೂನಿಯನ್​ ನಾರಿಶಕ್ತಿ, ಯೂನಿಯನ್​ ಎಂಎಸ್​ಇ ಸಪೋರ್ಟ್​, ಸ್ಟಾ$್ಯಂಡ್​&ಅಪ್​ ಇಂಡಿಯಾ, ಯೂನಿಯನ್​ ಮುದ್ರಾ, ಪಿಎಂಇಜಿಪಿ, ಪಿಎಂ ವಿಶ್ವಕರ್ಮ, ಕ್ವಾಂಟಮ್​ ಲೀಪ್​ ಎಂಎಸ್​ಎಂಇ, ಸರ್ಕಾರಿ ಯೋಜನೆಗಳು ಪ್ರದರ್ಶಿಸಲಾಯಿತು.

300ಕ್ಕೂ ಹೆಚ್ಚು ಉದ್ಯಮಿಗಳು, ಸ್ವ&ಸಹಾಯ ಗುಂಪುಗಳು ಭಾಗವಹಿಸಿದ್ದು, 114 ಅರ್ಹ ಸಾಲಗಾರರಿಗೆ 62 ಕೋಟಿ ರೂ. ಮೌಲ್ಯದ ಸಾಲ ವಿತರಿಸಲಾಯಿತು. ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾದ ಉಪ ಪ್ರಾದೇಶಿಕ ಮುಖ್ಯಸ್ಥ ಮನೀಶ ಮೇಣ್ಣವರ ಮತ್ತು ಾನೇಶ್​ಕುಮಾರ್​, ಸಾಲ ವಿಭಾಗದ ಮುಖ್ಯಸ್ಥ ಆಶಿಶ್​ ಕುಬೆ, ಎಂಎಲ್​ಪಿ ಮುಖ್ಯಸ್ಥ ಆಂಥೋನಿ ಸೆರಾವ್​, ಆರ್​ಎಲ್​ಪಿ ಮುಖ್ಯಸ್ಥ ಧರೆಪ್ಪ ಕುಡಚಿ, ಬ್ಯಾಂಕ್​ನ ಪ್ರಾದೇಶಿಕ ಮುಖ್ಯಸ್ಥೆ ಆರತಿ ರೌರ್ನಿಯಾರ್​ ಇತರರಿದ್ದರು.

&&&

05 ಜಗ್ಗು 7

ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾ ಬೆಳಗಾವಿ ಪ್ರಾದೇಶಿಕ ಕಚೇರಿಯಲ್ಲಿ ಮೆಗಾ ಎಂಎಸ್​ಎಂಇ ಔಟ್​ರೀಚ್​ ಅಭಿಯಾನ ಉದ್ಘಾಟಿಸಲಾಯಿತು. ಮಹೇಂದ್ರ ರೆಡ್ಡಿ, ಮನೀಶ ಮೇಣ್ಣವರ, ಾನೇಶ್​ಕುಮಾರ್​, ಆಶಿಶ್​ ಕುಬೆ, ಆಂಥೋನಿ ಸೆರಾವ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net