

ನ್ಯಾಮತಿ: ಜಿಟಿಜಿಟಿ ಮಳೆಯಿಂದಾಗಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಕೆಲ ಭಾಗಗಳ ಬೆಳೆಗಳು ಹಳದಿ, ಕೆಂಪು ಬಣ್ಣಕ್ಕೆ ತಿರುಗಿದ್ದು, ರೈತರು ಸಮರ್ಪಕ ಪೋಷಕಾಂಶ ನಿರ್ವಹಣೆ ಮಾಡುವ ಮೂಲಕ ಬೆಳೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಪ್ರತಿಮಾ.ಎ.ಎಸ್ ರೈತರಿಗೆ ಸಲಹೆ ನೀಡಿದ್ದಾರೆ.
ಕಪ್ಪು ಮಣ್ಣಿನಲ್ಲಿ ಹೆಚ್ಚಾಗಿ ಈ ತರಹದ ಸಮಸ್ಯೆ ಕಂಡುಬಂದಿದ್ದು, ಎಡೆಕುಂಟೆ ಹೊಡೆಯುವ ಮೂಲಕ ಕಳೆಗಳ ಹತೋಟಿ ಮಾಡಿ ಮೇಲುಗೊಬ್ಬರವಾಗಿ ಯೂರಿಯಾ ಬಳಕೆ ಮಾಡಿ 13;0;45-40ಗ್ರಾಂ, 19ಆಲ್-40ಗ್ರಾಂ ಲಘು ಪೋಷಕಾಂಶ (ಟಿಎಂಎಕ್ಸ್ 2-15ಗ್ರಾಂ) ಪ್ರತಿ ಲೀಟರ್ ಕ್ಯಾನಿಗೆ ಬೆರೆಸಿ ಸಿಂಪರಣೆ ಮಾಡಿ ಪ್ರತಿ ಎಕರೆಗೆ 12-14 ಕ್ಯಾನ್ ದ್ರಾವಣವನ್ನು ಬಳಸುವಂತೆ ತಿಳಿಸಿದ್ದಾರೆ.
ಅವಳಿ ತಾಲೂಕಿನಲ್ಲಿ ಸುಮಾರು 500 ಹೆಕ್ಟೇರ್‌ರಿಂದ 600 ಹೆಕ್ಟೇರ್ ಪ್ರದೇಶದಲ್ಲಿ ಈ ರೀತಿ ಸಮಸ್ಯೆ ಕಂಡುಬಂದಿರುವುದಾಗಿ ಅವರು ತಿಳಿಸಿದ್ದಾರೆ.