ಮೆಕ್ಕೆಜೋಳ ಖರೀದಿಗೆ ನೋಂದಣಿ

Maize-1
Published on

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕ ಹಾಲು ಮಹಾಮಂಡಳಿ, ಪ್ರತಿ ಕ್ವಿಂಟಾಲ್‌ಗೆ 2,250 ರೂ. ದರದಲ್ಲಿ ರೈತರಿಂದ ಮೆಕ್ಕೆಜೋಳ ಖರೀದಿಗೆ ಮುಂದಾಗಿದೆ. ಆಸಕ್ತರು ಒಂದು ಕೆ.ಜಿ. ಮೆಕ್ಕೆಜೋಳದ ಸ್ಯಾಂಪಲ್, ಫ್ರೂಟ್ಸ್ ಸಂಖ್ಯೆಯೊಂದಿಗೆ ಹತ್ತಿರದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹೆಸರು ನೋಂದಾಯಿಸಬಹುದಾಗಿದೆ.
ಈಗಾಗಲೇ ನ.13ರಿಂದ ನೋಂದಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ರೈತರಿಗೆ ಸಾಗಾಣಿಕೆ ವೆಚ್ಚದ ಹೊರೆ ತಗ್ಗಿಸಲು, ಮಹಾಮಂಡಳಿ ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಿದೆ. ಪ್ರತಿ ರೈತರಿಂದ ಗರಿಷ್ಠ ಒಂದು ಸಾವಿರ ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಡಾ.ಎಸ್.ಎಂ.ಮೂರ್ತಿ-7760980540 (ದಾವಣಗೆರೆ), ಡಾ.ಕೆ.ಪಿ.ಸಂಜಯ್-8971435116 (ಚಿತ್ರದುರ್ಗ) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net