

ಮೈಸೂರು: ದೇಶದಲ್ಲಿ ಮೆಕಾಲೆ ಶಿಕ್ಷಣ ಪದ್ಧತಿ ಅನುಸರಿಸುತ್ತಿರುವುದರಿಂದ ಭ್ರಷ್ಟಾಚಾರಕ್ಕೆ ದಾರಿಯಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ ಅಭಿಪ್ರಾಯಪಟ್ಟರು.
ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಪರಿವರ್ತನೆಗೆ ಶಿಕ್ಷಣ ದೊಡ್ಡ ಅಸ್ರ ಎಂದು ಸ್ವಾಮಿವಿವೇಕಾನಂದ ಅವರು ಪ್ರತಿಪಾದಿಸಿದ್ದರು. ಆದರೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ನಮ್ಮ ದೇಶದಲ್ಲಿ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು. ಇದರಿಂದ ಶಿಕ್ಷಣ ಕ್ಷೇತ್ರ, ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ದಾರಿಯಾಗಿತ್ತು ಎಂದರು.
ಶಿಕ್ಷಣ ಕ್ಷೇತ್ರವನ್ನು ಗಟ್ಟಿಗೊಳಿಸಲು ಬದಲಾವಣೆಯನ್ನು ತಂದಿರುವ ಕೇಂದ್ರ ಸರ್ಕಾರ ಈಗ ‘ರಾಷ್ಟ್ರೀಯ ಶಿಕ್ಷಣ ನೀತಿ- 2020’ ಅನ್ನು ಜಾರಿಗೊಳಿಸಿದೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.
1949ರಲ್ಲಿ ಪ್ರಾರಂಭವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯು ವಿದ್ಯಾರ್ಥಿಗಳಲ್ಲಿ ದೇಶಾಭಿವಾನ ಮೂಡಿಸುವ ದೇಶದ ನಂಬರ್ ಒನ್ ವಿದ್ಯಾರ್ಥಿ ಸಂಘಟನೆಂಾಗಿ ಹೊರ ಹೊಮ್ಮಿದೆ. ಪ್ರಸ್ತುತ ಸಂಘಟನೆಯಲ್ಲಿ 45ಲಕ್ಷ ಸದಸ್ಯರಿದ್ದು, ದೇಶದ ಎಲ್ಲ ವಿಶ್ವವಿದ್ಯಾನಿಲಂುಗಳಲ್ಲೂ ಸಕ್ರಿಂುವಾಗಿದೆ ಎಂದರು.
ಎಬಿವಿಪಿ ಹೋರಾಟದ ಪರಿಣಾಮವಾಗಿ ರಾಜೀವ್ ಗಾಂಧಿ ಪ್ರಧಾನಿಂಾಗಿದ್ದಾಗ 18 ವರ್ಷಕ್ಕೆ ಮತದಾನದ ಅವಕಾಶ ಕಲ್ಪಿಸಲಾಯಿತು. ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ನಡೆದ ಜೆಪಿ ಆಂದೋಲನದಲ್ಲಿ ಎಬಿವಿಪಿ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದು ಹೇಳಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಎಂ.ಶಿವು ವಾತನಾಡಿ, ಎಬಿವಿಪಿಯು ಈ ನೆಲದ ಸಂಸ್ಕ ೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಂಸ್ಕೃತಿಕವಾಗಿ ಕೆಲಸ ವಾಡುತ್ತಿದೆ ಎಂದರು.
ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿ ಸಮಿತಿ ಸದಸ್ಯೆ ನಮಿತಾ ನಾರಾಯಣ್, ನಗರ ಸಂಚಾಲಕ ಪ್ರಜ್ವಲ್, ಜಿಲ್ಲಾ ಪ್ರಮುಖ ಮಹದೇವಪ್ರಸಾದ್ ಇತರರಿದ್ದರು.