ಮೈಸೂರು: ಮತದಾನಕ್ಕೆ ನಿಯೋಜನೆಗೊಂಡಿದ್ದ ಕಾರ್ಯಕರ್ತರು, ಏಜೆಂಟರಿಗೆ ಆಯಾ ಪಕ್ಷದ ಮುಖಂಡರು ಊಟ, ತಿಂಡಿ, ತಂಪು ಪಾನೀಯ, ಕಾಫಿ, ಟೀ ಸೇರಿದಂತೆ ಇನ್ನಿತರ ತಿಂಡಿ, ತಿನಿಸು ನೀಡಿ ಸಂತೃಪ್ತಗೊಳಿಸುತ್ತಿದ್ದರು.
ಮತಗಟ್ಟೆ ಬಳಿ ಮತದಾರರಿಗೆ ಚೀಟಿ ಪಡೆದು ಕೊಡುವುದಲ್ಲದೇ ಮತದಾರರನ್ನು ಓಲೈಕೆಯಲ್ಲಿ ತೊಡಗಿದ್ದವರಿಗೆ ಮಧ್ಯಾಹ್ನ ಕೆಲ ಮತಗಟ್ಟೆ ಬಳಿ ಬಿರಿಯಾನಿ, ಪಲಾವ್, ಬಾತು, ಮೊಸರನ್ನ, ಕಾಫಿ, ಟೀ, ತಂಪುಪಾನಿ ಸೇರಿದಂತೆ ಇನ್ನಿತರ ತಿಂಡಿ, ತಿನಿಸುಗಳನ್ನು ಸರಬರಾಜು ಮಾಡುತ್ತಿದ್ದರು.