

ಬೆಟ್ಟದಪುರ: ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಮತ್ತು ಕೆಂಪೇಗೌಡ ಥೀಮ್ ಪಾರ್ಕ್ ಉದ್ಘಾಟನಾ ಕಾರ್ಯಕ್ರಮ ಅಂಗವಾಗಿ ಮೃತ್ತಿಕೆ ಸಂಗ್ರಹ ರಥವನ್ನು ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಗ್ರಾಮಸ್ಥರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಬಳಿಕ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಪೂಜೆ ಸಲ್ಲಿಸಿ ಮೃತ್ತಿಕೆ ನೀಡಿ ಬೀಳ್ಕೊಟ್ಟರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್.ದೇವೇಗೌಡ, ಉಪಾಧ್ಯಕ್ಷೆ ಪ್ರೇಮಾ, ಸದಸ್ಯರಾದ ಸಿ.ಪಿ.ಸುರೇಶ್, ಸುನೀತಾ, ಸರಸ್ವತಿ, ಜಯಶ್ರೀ, ಪಿಡಿಒ ಶ್ರೀದೇವಿ, ಮುಖಂಡರಾದ ನಿಂಗರಾಜೇಗೌಡ, ಸಿ.ಕೆ.ಪ್ರಕಾಶ್, ಸಿ.ಆರ್.ಆಂಜನಿಗೌಡ, ಸಣ್ಣತಮ್ಮೇಗೌಡ, ಅರುಣ್, ಮಂಜು, ಕುಮಾರ್, ಮಹೇಶ್, ಅಂಗನವಾಡಿ ಕಾರ್ಯಕರ್ತೆರಾದ ಆಶಾ, ಹೇಮಾ, ಸ್ವಸಹಾಯ ಸಂಘದ ಬಿ.ಎಸ್ ಜಯಲಕ್ಷ್ಮೀ, ಮೀನಾಕ್ಷಿ, ಅರ್ಚಕ ಮಂಜು ಆರಾಧ್ಯ ಇತರರು ಇದ್ದರು.