ಮೃತ್ತಿಕಾ ಸಂಗ್ರಹ ಅಭಿಯಾನ ರಥಕ್ಕೆ ಚಾಲನೆ

02 yelandur 01
Published on

ಯಳಂದೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಹಾಗೂ ಉದ್ಯಾನಕ್ಕೆ ಪವಿತ್ರ ಮೃತ್ತಿಕಾ (ಮಣ್ಣು) ಸಂಗ್ರಹಿಸುವ ಉದ್ದೇಶದಿಂದ ತಾಲೂಕಿಗೆ ಆಗಮಿಸಿದ ಕೆಂಪೇಗೌಡ ರಥವನ್ನು ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ತಾಲೂಕು ಒಕ್ಕಲಿಗ ಸಂಘದ ಸದಸ್ಯರು ಸ್ವಾಗತಿಸಿ ಮಣ್ಣನ್ನು ಪೂಜಿಸಿ ನೀಡಿದರು.

‘ಬನ್ನಿ ನಾಡ ಕಟ್ಟೋಣ…’ ಎಂಬ ಸಂದೇಶ ಹೊತ್ತ ರಥವನ್ನು ಪಟ್ಟಣದ ಬಳೇಮಂಟಪದ ಗೌರೇಶ್ವರ ದೇವಸ್ಥಾನದಲ್ಲಿ ಕಳಸಪೂಜೆ ಹೊತ್ತು ಪೂರ್ಣ ಕುಂಭದೊಂದಿಗೆ ಮಂಗಳವಾದ್ಯಗಳೊಂದಿಗೆ ಸ್ವಾಗತಿಸಲಾಯಿತು.

ಮೈಸೂರು, ಚಾಮರಾಜನಗರ ಒಕ್ಕಲಿಗ ಸಂಘದ ಜಿಲ್ಲಾ ನಿರ್ದೇಶಕ ವಡಗೆರೆ ಕುಮಾರ ಮಾತನಾಡಿ, ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಉದ್ಯಾನಕ್ಕೆ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಾನಾ ಭಾಗಗಳಿಂದ ಪವಿತ್ರ ಮಣ್ಣು ಸಂಗ್ರಹಿಸಲಾಗುತ್ತಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದರು.

ತಾಲೂಕಿನ ಕೆಸ್ತೂರು, ಹೊನ್ನೂರು, ಅಂಬಳೆ, ಯಳಂದೂರು ಗುಂಬಳ್ಳಿ, ಯರಗಂಬಳ್ಳಿ, ದಾಸನಹುಂಡಿ, ಬಿಳಿಗಿರರಿರಂಗನಬೆಟ್ಟ, ವಡಗೆರೆ, ಯರಿಯೂರು, ಮದ್ದೂರು, ಅಗರ, ಮಾಂಬಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪವಿತ್ರ ಮಣ್ಣು ಸಂಗ್ರಹಿಸಿ ರಥವನ್ನು ಅದ್ದೂರಿಯಾಗಿ ಬರಮಾಡಿಕೊಂಡರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ್, ಮಹದೇವನಾಯಕ, ಮುಖ್ಯಾಧಿಕಾರಿ ಮಲ್ಲೇಶ್, ಗ್ರಾಪಂ ಮಾಜಿ ಅಧ್ಯಕ್ಷ ಡಿ.ಸಿ.ಬಾಬು, ಮುಖಂಡರಾದ ನಿಂಗರಾಜು, ದಿವಾಕರ್, ಮಲ್ಲು, ಗಣಿಗನೂರು ಪ್ರಸಾದ್, ಜಯಣ್ಣ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net