ಮೃತರ ಕುಟುಂಬಕ್ಕೆ ಪರಿಹಾರ ನೀಡಿ

11sor5
ಹೊಳೆಹೊನ್ನೂರು ಸಮೀಪದ ಮಂಗೋಟೆ ಗ್ರಾಮದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷ ಜಗದೀಶ್, ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಮಾಜಿ ಶಾಸಕ ಅಶೋಕ್ ನಾಯ್ಕ, ಕಿರಣ್‌ಕುಮಾರ್, ಜಗದೀಶ್ ಗೌಡ, ಶಿವನ ಗೌಡ, ಸುಬ್ರಹ್ಮಣಿ, ಮಂಜುನಾಥ್, ತಿಪ್ಪೇಶ್, ರಮೇಶ್ ಇತರರಿದ್ದರು.
Published on

ಸೊರಬ: ಇತ್ತೀಚಿಗೆ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ದಂಪತಿ ಕುಟುಂಬಕ್ಕೆ ಪರಿಹಾರ ಕೊಡಿಸುವಂತೆ ಒತ್ತಾಯಿಸಿ ಕಪ್ಪಗಳಲೆಯ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ ಟ್ರಸ್ಟ್‌ಯಿಂದ ತಹಸೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಉಳವಿ ಹೋಬಳಿ ಕಪ್ಪಗಳಲೆ ಗ್ರಾಮದ ನಿವಾಸಿಯಾಗಿದ್ದ ಕೃಷ್ಣಪ್ಪ (53) ಮತ್ತು ಅವರ ಪತ್ನಿ ವಿನೋದಾ (43) ಇವರು ಜೂ. 26ರಂದು ಸಂಜೆ ಸಮಯದಲ್ಲಿ ಒಣಗಲು ಹಾಕಿದ್ದ ಬಟ್ಟೆ ತೆಗೆಯಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶವಾಗಿ ಇಬ್ಬರೂ ಮೃತಪಟ್ಟಿದ್ದಾರೆ. ಇವರ ಕುಟುಂಬದಲ್ಲಿ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು ಆಧಾರ ಇಲ್ಲದಂತಾಗಿದೆ. ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥವಾಗಿದ್ದು ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಟ್ರಸ್ಟ್ ಅಧ್ಯಕ್ಷ ಕೆ.ಎಚ್.ಗಣಪತಿ ಒತ್ತಾಯಿಸಿ, ಮನವಿ ಸಲ್ಲಿಸಿದರು.

ಟ್ರಸ್ಟ್‌ನ ಅರುಣಕುಮಾರ್ ಪುಟ್ಟನಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net