ಮೃತ ಯುವಕನ ಪಾಲಕರಿಗೆ ವಿಮೆ ಚೆಕ್ ವಿತರಣೆ

Group insurance
ಎಚ್.ಆರ್.ದಿನೇಶ್ ಪಾಲಕರಿಗೆ ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಮಂಜೂರಾಗಿದ್ದ ವಿದ್ಯಾರ್ಥಿಯ ವಿಮೆ ಹಣ 5 ಲಕ್ಷ ರೂ.ಗಳ ಚೆಕ್ಕನ್ನು ವಿತರಿಸಲಾಯಿತು.ಡಾ. ಚೌಡಯ್ಯ ಕಟ್ನವಾಡಿ, ಪಿ.ಮಹೇಶ,ಗಂಗಾನಾಯಕ್ ಇದ್ದರು.
Published on

ಹೊಳೆನರಸೀಪುರ: ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದ ತಾಲೂಕಿನ ದೊಡ್ಡಕಾಡನೂರು ಜೆಎಸ್‌ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಎಚ್.ಆರ್.ದಿನೇಶ್ ಪಾಲಕರಿಗೆ ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಮಂಜೂರಾಗಿದ್ದ ವಿದ್ಯಾರ್ಥಿಯ ವಿಮೆ ಹಣ 5 ಲಕ್ಷ ರೂ.ಗಳ ಚೆಕ್ಕನ್ನು ವಿತರಿಸಲಾಯಿತು.

ಕಳೆದ ಸೆಪ್ಟೆಂಬರ್‌ನಲ್ಲಿ ಹೊನ್ನೇನಹಳ್ಳಿ ಗ್ರಾಮದ ತನ್ನ ಮನೆಯ ಸಮೀಪ ಬೆಂಕಿ ಅವಘಡಕ್ಕೆ ಸಿಲುಕಿ ದಿನೇಶ್ ಮೃತಪಟ್ಟಿದ್ದ. ಈ ಸಂಬಂಧ ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಮಂಜೂರಾಗಿದ್ದ ವಿದ್ಯಾರ್ಥಿಯ ವಿಮೆ ಹಣ 5 ಲಕ್ಷ ರೂ.ಗಳ ಚೆಕ್ಕನ್ನು ಕಾಲೇಜಿನ ಪ್ರಾಂಶುಪಾಲ ಡಾ. ಚೌಡಯ್ಯ ಕಟ್ನವಾಡಿ ಆತನ ಪಾಲಕರಿಗೆ ಶನಿವಾರ ಹಸ್ತಾಂತರಿಸಿದರು.

ಹಿರಿಯ ವಿದ್ಯಾರ್ಥಿ ಮುಖಂಡ ಟೈಲರ್ ಎಸ್. ರವಿ, ಅರ್ಥಶಾಸ್ತ್ರ ಉಪನ್ಯಾಸಕ ಪಿ.ಮಹೇಶ, ಹಿಂದಿ ಶಿಕ್ಷಕ ಗಂಗಾನಾಯಕ್, ಸಿಬ್ಬಂದಿ ಕೆ.ಪಿ.ಮಲ್ಲೇಶ, ಎ.ಎನ್. ನಟರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net