ಮೃತ ಕಾರ್ಮಿಕನ ಕುಟುಂಬಕ್ಕೆ ಒಕ್ಕೂಟ ನೆರವು

Karmik Mahasangh Support
Published on

ಬೀದರ್: ಇಲ್ಲಿಯ ಶಹಾಗಂಜ್‍ನ ಮೃತ ಸೆಂಟ್ರಿಂಗ್ ಕಾರ್ಮಿಕ ಸಂಜುಕುಮಾರ ಅವರ ಕುಟುಂಬಕ್ಕೆ ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘಗಳ ಒಕ್ಕೂಟ ನೆರವು ಒದಗಿಸಿದೆ.
ಒಕ್ಕೂಟದ ಅಧ್ಯಕ್ಷ ಸೂರ್ಯಕಾಂತ ಸಾಧುರೆ ಅವರು ಮೃತರ ಪತ್ನಿಗೆ ರೂ. 5 ಸಾವಿರ ನಗದು ನೀಡಿದರು. ಕಾರ್ಮಿಕ ಇಲಾಖೆಯಿಂದ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಒಕ್ಕೂಟದ ಗೌರವಾಧ್ಯಕ್ಷ ಪಂಢರಿ ಪೂಜಾರಿ, ಉಪಾಧ್ಯಕ್ಷ ಯೇಶಪ್ಪ ಬೆಳ್ಳೂರ, ಕಾರ್ಯದರ್ಶಿ ತುಕಾರಾಮ ಗೋರೆ, ಸಹ ಕಾರ್ಯದರ್ಶಿ ಅಶೋಕ ವಗ್ಗೆ, ಖಜಾಂಚಿ ಅನಿಲ್ ಗಂಜಕರೆ, ಸಂಘಟನಾ ಸಂಚಾಲಕ ರಾಜಕುಮಾರ ಕಂಳೆ, ಶಿವರಾಜ ಜಮೀಸ್ತಾನಪುರ, ಪ್ರಕಾಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net