

ಹಾಸನ: ಮೃತ ಅರ್ಜುನ ಆನೆಯ ಹೆಸರಿನಲ್ಲಿ ಹಣ ವಸೂಲಾತಿ ಮಾಡಲು ಹಾಗೂ ಸ್ಮಾರಕವನ್ನು ನಿರ್ಮಾಣ ಮಾಡಲು ಮುಂದಾಗಿರುವ ಎಚ್.ಡಿ. ನವೀನ್ ಎಂಬ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೋಳ್ಳಬೇಕು ಎಂದು ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆ ಆಕೋಶ ವ್ಯಕ್ತಪಡಿಸಿದರು.
6 ತಿಂಗಳ ಹಿಂದೆ ನಮ್ಮ ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಅಂಬಾರಿಯನ್ನು ಹೊತ್ತು ಸಕಲೇಶಪುರ ತಾಲೂಕಿನ ಯಸಳೂರು ವಲಯ ದಬ್ಬಳ್ಳಿಕಟ್ಟೆ ಅರಣ್ಯದಲ್ಲಿ ಕಾಡಾನೆ ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ಕಾಡಾನೆಯ ದಾಳಿಗೆ ಅರ್ಜುನ ಆನೆ ಬಲಿಯಾಗಿದ್ದು, ಇದರ ಹೆಸಸರಿನಲ್ಲಿ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ನವೀನ್ ಎಂಬ ವ್ಯಕ್ತಿ ಸುಳ್ಳು ಹೇಳಿಕೊಂಡು ತನ್ನ ವೈಯಕ್ತಿಕ ಖಾತೆಗೆ ಸಾರ್ವಜನಿಕರಿಂದ ರಾಜ್ಯದ ಎಲ್ಲೆಡೆ ಲಕ್ಷಾಂತರ ರೂ. ಹಣವನ್ನು ವಸೂಲು ಮಾಡಿರುತ್ತಾನೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಅರ್ಜುನ ಆನೆಯ ಸಾವುನ್ನು ತನ್ನ ಬಂಡವಾಳವನ್ನಾಗಿ ಮಾಡಿಕೊಂಡು ಅರ್ಜುನ ಪಡೆ ಕರ್ನಾಟಕ ಎಂಬ ವಾರ್ಟ್ಸಪ್ ಗ್ರೂಪ್ ಹಾಗೂ ನವೀನ್ ಬೆಳ್ಳಿ ಎಂಬ ಇನ್‌ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದಾನೆ. ಅದರಲ್ಲಿ ಮೃತ ಅರ್ಜುನ ಆನೆಯ ಕುರಿತಾಗಿ ನಾನು ಹೋರಾಟ ಮಾಡುತ್ತೇನೆ ಎಂದು ಸುಳ್ಳು ವರದಿಗಳನ್ನು ಹಬ್ಬಿಸುತ್ತಾ ಜನರಿಗೆ ತಾನು ಹೋರಾಟಗಾರ ಎಂದು ನಂಬಿಸುತ್ತಾ ಧೀರ ಅರ್ಜುನನ ತಾತ್ಕಾಲಿಕ ಸ್ಮಾರಕ ನಿರ್ಮಾಣಕ್ಕೆ ನಿಮ್ಮ ಸಹಾಯ ಎಂದು ನಾಮಫಲಕವನ್ನು ಹಾಕಿಕೊಂಡು ಅರ್ಜುನನ ಸ್ಮಾರಕವನ್ನು ನಿರ್ಮಾಣ ಮಾಡುತ್ತೇನೆ ಎಂದು ಸುಳ್ಳು ಲಕ್ಷಾಂತರ ರೂ. ಹಣವನ್ನು ವಸೂಲು ಮಾಡಿರುತ್ತಾನೆ ಎಂದು ದೂರಿದರು.
ಸ್ಮಾರಕವನ್ನು ನಿರ್ಮಾಣ ಮಾಡಲು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಕಲೇಶಪುರ ಹಾಗೂ ಯಸಳೂರು ವಲಯ ಅರಣ್ಯಾಧಿಕಾರಿಗಳು ಅನುಮತಿಯನ್ನು ನೀಡಿರುತ್ತಾರೆ. ಆ ನಿಟ್ಟಿನಲ್ಲಿ ನಾನು ರಕ್ಷಿತಾ ಅರಣ್ಯದೊಳಗೆ ಪ್ರವೇಶ ಮಾಡಿ ಸಮಾಧಿಗೆ ತಾತ್ಕಾಲಿಕ ಸ್ಮಾರಕ ಮಾಡುವುದಾಗಿ ಹೇಲಿದ್ದಾನೆ. ಇನ್ನೊಂದು ಕಡೆ ಚಿತ್ರನಟ ದರ್ಶನ್ ಅವರು 40 ಕಲ್ಲು ಕೊಡಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈತನೇ ಹಾಕಿದ್ದಾನೆ. ಆದ್ದರಿಂದ ಈತನ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಸತ್ಯ ಸತ್ಯತೆಯನ್ನು ಜನರಿಗೆ ತಿಳಿಸಬೇಕು ಎಂದು ದೂರು ನೀಡಿದರು ಕೂಡ ಅರಣ್ಯ ಇಲಾಖೆ ಈತನ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಲನ್ನು ತೆಗೆದುಕೊಂಡು ಇತ್ತೀಚಿಗೆ ಅರಣ್ಯದೊಳಗೆ ಪ್ರವೇಶಿಸಿದಾಗ ಅರಣ್ಯ ಅಧಿಕಾರಿಗಳು ತಡೆದು. ಕಲ್ಲು ವಶಪಡಿಸಿಕೊಂಡು ಆತನ ಖಾತೆಗೆ ಅರಣ್ಯ ಅಧಿಕಾರಿಗಳು 30,000 ವರ್ಗಾವಣೆ ಮಾಡಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಅರಣ್ಯ ಇಲಾಖೆ ಮತ್ತು ನವೀನ್ ಮೇಲೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದೆ. ಆದ್ದರಿಂದ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿಸಸ್ಥರು ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ರಕ್ಷಣಾ ಸೇನೆ ತಾಲೂಕು ಅಧ್ಯಕ್ಷ ಪುಟ್ಟರಾಜು ಮಳಲಿ, ತಾಲೂಕು ಉಪಾಧ್ಯಕ್ಷ ತೇಜಸ್ ಗೌಡ, ತಾಲೂಕು ಉಸ್ತುವಾರಿ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.