

ಸರ್ಜಾಪುರ: ಸರ್ಜಾಪುರ&ಬಾಗಲೂರು ರಸ್ತೆಯ ತಿಂಡ್ಲು ಗೇಟ್ ಬಳಿ ನಿರ್ಮಾಣ ಹಂತದ ಅಪಾರ್ಟ್ಮೆಂಟ್ನಲ್ಲಿ ಹೋಳಿ ಹಬ್ಬದ ಪ್ರಯುಕ್ತ ಶನಿವಾರ ಸಂಜೆ ಎಣ್ಣೆ ಪಾರ್ಟಿ ಮಾಡಲು ಬಂದ ಮೂವರು ಸ್ನೇಹಿತರಿಂದಲೇ ಕೊಲೆಯಾಗಿದ್ದಾರೆ.
ಬಿಹಾರ ಮೂಲದ ಅನ್ಸು(22) ರಾಧೆ ಶ್ಯಾಮ್(23), ದೀಪು(21) ಮೃತರು. ಬಿಹಾರ ಮೂಲದ 6 ಮಂದಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದು, ಹೋಳಿ ಹಬ್ಬದ ನಿಮಿತ್ತ ಮೂರು ದಿನ ಕೆಲಸಕ್ಕೆ ರಜಾ ಮಾಡಿ ಹಬ್ಬ ಆಚರಣೆಯಲ್ಲಿ ಭಾಗಿಯಾಗಿದ್ದರು. ನಂತರ ಎಲ್ಲರೂ ಸೇರಿ ಒಂದು ಕೋಣೆಯಲ್ಲಿ ಅಡುಗೆ ತಯಾರಿಸಿ ಮತ್ತೊಂದು ಕೋಣೆಯಲ್ಲಿ ಮದ್ಯಸೇವನೆ ಮಾಡುತ್ತಿದ್ದರು. ಈ ವೇಳೆ ಜಗಳ ನಡೆದಿದ್ದು, ಕುಡಿದ ಅಮಲಿನಲ್ಲಿದ್ದ ಯುವಕರು ಮೂವರನ್ನು ಹತ್ಯೆಗೈದಿದ್ದಾರೆ. ಮೂರನೇ ಮಹಡಿಯ ಒಂದು ಕೋಣೆಯಲ್ಲಿ ಇಬ್ಬರ ಶವ, ಮತ್ತೊಂದು ಕೋಣೆಯಲ್ಲಿ ಒಂದು ಶವ ಪತ್ತೆಯಾಗಿದೆ.
ಸರ್ಜಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.ಐಜಿ ಲಾಭುರಾಮ್, ಎಸ್ಪಿ ಸಿ.ಕೆ ಬಾಬಾ, ಅಡಿಷನಲ್ ಎಸ್ಪಿ ನಾಗೇಶ್ಕುಮಾರ್, ಇನ್ಸ್ಪೆಕ್ಟರ್ ಪಿ.ಜಿ ನವೀನ್ಕುಮಾರ್, ತಿಪ್ಪೇಸ್ವಾಮಿ, ಸಬ್ ಇನ್ಸ್ಪೆಕ್ಟರ್ ಡಿ.ಬಿ ಬಾರ್ಕಿ, ಬೆರಳಚ್ಚು ತರು ಹಾಗೂ ಶ್ವಾನದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ, ಮೃತ ದೇಹಗಳನ್ನು ಅತ್ತಿಬೆಲೆಯ ಆಕ್ಸ್ರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಇನ್ಸ್ಪೆಕ್ಟರ್ ಮಂಜುನಾಥ್, ರಾವೇಂದ್ರ, ಸೋಮಶೇಖರ್, ಸಂಜೀವ್ ಮಹಾಜನ್ ನೇತೃತ್ವದಲ್ಲಿ 4 ತಂಡ ರಚನೆ ಮಾಡಲಾಗಿದೆ.
ಹೋಳಿ ರಜೆ ಕಾರಣ ಮೂವರೂ ಮೂರ್ನಾಲ್ಕು ಮಂದಿ ಸ್ನೇಹಿತರೊಂದಿಗೆ ಮದ್ಯದ ಪಾರ್ಟಿ ಆಯೋಜಿಸಿದ್ದರು. ಬಂದಿದ್ದವರ ಪೈಕಿ ಒಬ್ಬಾತ ಗೆಳೆಯನ ಅಕ್ಕನ ಜತೆಗೆ ಫೋನಿನಲ್ಲಿ ಮಾತನಾಡಿದ್ದೇ ಜಗಳಕ್ಕೆ ಕಾರಣವಾಗಿದೆ ಎಂದು ಮೆಲ್ನೋಟಕ್ಕೆ ಕಂಡು ಬಂದಿದ್ದು, ಮೂವರು ಸ್ಥಳದಲ್ಲಿದ್ದ ರಾಡ್ ಮತ್ತು ಬಾಟಲ್ಗಳಿಂದ ಹಲ್ಲೆ ನಡೆಸಿದ್ದಾರೆ. ಇಬ್ಬರು ಮೃತಪಟ್ಟಿದ್ದರು. ಒಬ್ಬನನ್ನು ಆಂಬುಲೆನ್ಸ್ಗೆ ಹಾಕುವಾಗ ಮೃತಪಟ್ಟಿದ್ಧಾನೆ ಎಂದು ಎಸ್.ಪಿ ಸಿ.ಕೆ ಬಾಬಾ ತಿಳಿಸಿದ್ದಾರೆ.