

ಮೈಸೂರು: ಮೂವರು ಅಂತಾರಾಜ್ಯ ಸರಗಳ್ಳರನ್ನು ಲಷ್ಕರ್ ಠಾಣೆ ಪೊಲೀಸ್ ಬಂಧಿಸಿದ್ದಾರೆ.
ನಗರದ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಸರಗಳ್ಳತನ ನಡೆದಿತ್ತು. ಈ ಕುರಿತು ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಇಬ್ಬರು ಅಂತಾರಾಜ್ಯ ಸರಗಳ್ಳರು ಸೇರಿ ಮೂವರನ್ನು ದಸ್ತಗಿರಿ ಮಾಡಿದ್ದರು. ಅವರಿಂದ 17 ಲಕ್ಷ ರೂ.ಮೌಲ್ಯದ 170 ಗ್ರಾಂ ತೂಕದ 4 ಚಿನ್ನದ ಸರಗಳನ್ನು ಜಪ್ತಿ ಮಾಡಲಾಗಿದೆ.
ಪತ್ತೆ ಕಾರ್ಯದಿಂದ ಲಷ್ಕರ್ ಠಾಣೆಯ 3, ದೇವರಾಜ ಠಾಣೆಯ 1 ಪ್ರಕರಣಗಳು ಪತ್ತೆಯಾಗಿವೆ.