ಮೂವರು ವಿದ್ಯಾರ್ಥಿಗಳಿಗೆ ಗಾಯ

images
Published on

ಕೊಳ್ಳೇಗಾಲ: ತಾಲೂಕಿನ ಚೆಲ್ಲುವನಹಳ್ಳಿ ರಸ್ತೆ ಬಳಿ ಪ್ಯಾಸೆಂಜರ್ ಆಟೋಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.


ಜಾಗೇರಿಯ ಪಾಸ್ಕಲ್ ನಗರದ ಸೆಂಟ್ ಆಗಸ್ಟೀನ್ ಐಸ್ಕೂಲ್‌ನಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪ್ರವೀಣ್, ಲಾರೆನ್ಸ್, ಮೆಲ್ವಿನ್ ಗಾಯಗೊಂಡವರು. ಈ ವಿದ್ಯಾರ್ಥಿಗಳು ಭಾನುವಾರ ಪಟ್ಟಣದ ಶಾಲೆಯೊಂದರಲ್ಲಿ ಎನ್.ಎಂ.ಎಂ.ಎಸ್ ಪರೀಕ್ಷೆ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ಪ್ಯಾಸೆಂಜರ್ ಆಟೋದಲ್ಲಿ ತೆರಳುವಾಗ ಚೆಲ್ಲುವನಹಳ್ಳಿ ರಸ್ತೆ ಬಳಿ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.

ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳಾದ ಪ್ರವೀಣ್, ಲಾರೆನ್ಸ್, ಮೆಲ್ವಿನ್ ಅವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಟೀನಾ ಚಿಕಿತ್ಸೆ ನೀಡಿದ್ದಾರೆ. ಲಾರೆನ್ಸ್ ಎಂಬಾತನ ತಲೆ ತೀವ್ರ ಪೆಟ್ಟಾಗಿರುವುದರಿಂದ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಯಾವುದೇ ಪ್ರಕರಣ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net